ADVERTISEMENT

ಪ್ರಯಾಣ ದರ ಏರಿಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 18:30 IST
Last Updated 5 ಅಕ್ಟೋಬರ್ 2012, 18:30 IST

ಹೊಸಕೋಟೆ: ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿನ ಪ್ರಯಾಣ ದರ ಏರಿಸಿರುವುದನ್ನು ವಿರೋಧಿಸಿ ತಾಲ್ಲೂಕು ಶಾಖೆಯ ಡಿವೈಎಫ್‌ಐನ ಸದಸ್ಯರು ಶುಕ್ರವಾರ ಸಂಜೆ ಹೆದ್ದಾರಿಯ ಚನ್ನಬೈರೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐನ ಅಧ್ಯಕ್ಷ ಎನ್.ಶ್ರೀನಿವಾಸಾಚಾರ್, `ಬಸ್ ದರ ಏರಿಸುವುದಿಲ್ಲ ಎಂದು ಜನತೆಗೆ ವಾಗ್ದಾನ ಮಾಡಿದ್ದ ಸಾರಿಗೆ ಸಚಿವರು ರಾತ್ರೋರಾತ್ರಿ ಬಸ್ ದರ ಏರಿಸಿರುವುದರ ಮೂಲಕ ಜನತೆಗೆ ವಂಚಿಸಿದ್ದಾರೆ.

ಬರಗಾಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿರುವ ಸಂದರ್ಭದಲ್ಲಿ ಏರಿಸಿರುವ ಬಸ್ ಪ್ರಯಾಣ ದರದಿಂದ ಇನ್ನಷ್ಟು ತೊಂದರೆಗೊಳಗಾಗಲಿದ್ದಾರೆ, ಈ ಕೂಡಲೇ ದರವನ್ನು ಇಳಿಸಬೇಕು~ ಎಂದು ಆಗ್ರಹಿಸಿದರು.

ಡಿವೈಎಫ್‌ಐ ಕಾರ್ಯದರ್ಶಿ ಎಚ್.ಎನ್.ಮೋಹನ್‌ಬಾಬು, ಮುಖಂಡರಾದ ವೈ.ರಾಮಾಂಜಿನಪ್ಪ, ನರಸಿಂಹಮೂರ್ತಿ ಮತ್ತಿತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.