ADVERTISEMENT

ಪ್ರಾಣಿಗಳಿಗೆ ‘ಕಾಲುಬಾಯಿ’ ಜ್ವರ

ಬನ್ನೇರುಘಟ್ಟ ಉದ್ಯಾನದ ಪ್ರಾಣಿಗಳನ್ನು ಬೇರೆಡೆ ಸ್ಥಳಾಂತರಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:56 IST
Last Updated 24 ಸೆಪ್ಟೆಂಬರ್ 2013, 19:56 IST
ಕಾಲು ಬಾಯಿ ಜ್ವರ ಪೀಡಿತ ಪ್ರಾಣಿಗಳಿಗೆ ಚುಚ್ಚುಮದ್ದು ಹಾಕುವ ಉದ್ದೇಶದಿಂದ ಪಶು ವೈದ್ಯರ ತಂಡ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಸಫಾರಿ ಮಾಡಿತು
ಕಾಲು ಬಾಯಿ ಜ್ವರ ಪೀಡಿತ ಪ್ರಾಣಿಗಳಿಗೆ ಚುಚ್ಚುಮದ್ದು ಹಾಕುವ ಉದ್ದೇಶದಿಂದ ಪಶು ವೈದ್ಯರ ತಂಡ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಸಫಾರಿ ಮಾಡಿತು   

ಬೆಂಗಳೂರು: ಬನ್ನೇರುಘಟ್ಟ ರಾಷ್ಟೀಯ ಉದ್ಯಾನದಲ್ಲಿನ ಕೆಲ ಪ್ರಾಣಿಗಳಿಗೆ ಕಾಲುಬಾಯಿ ಜ್ವರ ಬಂದಿರುವುದು ಅರಣ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ.

ಕಾಯಿಲೆಯನ್ನು ಹತೋಟಿಗೆ ತರಲು ನಿರ್ಧರಿಸುವ ಇಲಾಖೆ ಜ್ವರಪೀಡಿತ ಪ್ರಾಣಿಗಳನ್ನು ಬೇರೆಡೆ ವರ್ಗಾಯಿಸಲು ಚಿಂತಿಸಿದೆ.
ಕಾಲು ಬಾಯಿ ಜ್ವರದ ಸೋಂಕು ಗಾಳಿಯೊಂದಿಗೆ ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮ ವಾಗಿ ಸಫಾರಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾಯಿಲೆ ಪೀಡಿತ ಪ್ರಾಣಿಗಳಿಗೆ ಉದ್ಯಾನದಿಂದ ಪ್ರತ್ಯೇಕಿ ಸುವ ಅಥವಾ ಅಂತಹ ಪ್ರಾಣಿಗಳನ್ನು ಕೊಲ್ಲುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿರ್ಧರಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕಾಲು ಬಾಯಿ ರೋಗದಿಂದ ಬಳಲುತ್ತಿರುವ ಕರಡಿಗಳು ಇತರೆ ಪ್ರಾಣಿಗಳಿಗಿಂಗ ನೂರು ಪಟ್ಟು ಬೇಗನೆ ಕಾಯಿಲೆಯನ್ನು ಹರಡುತ್ತವೆ. ಹೀಗಾಗಿ, ಮೊದಲು ಜ್ವರಪೀಡಿತ ಕರಡಿಗಳನ್ನು ಹಿಡಿದು ಮುಂಜಾಗ್ರತಾ ಕ್ರಮ ಕೈಗೊಳ್ಳು ವಂತೆ ಅರಣ್ಯ ಇಲಾಖೆಗೆ ಸಲಹೆ ನೀಡ ಲಾಗಿದೆ. ಸುರಕ್ಷತೆ ದೃಷ್ಠಿಯಿಂದ ಕನಿಷ್ಠ ಐದು ವಾರಗಳ ಕಾಲ ಸಫಾರಿಯನ್ನು ನಿರ್ಬಂಧಿಸಬೇಕಾಗುತ್ತದೆ’ ಎಂದು ಭಾರ ತೀಯ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (ಐಎಎಚ್‌ವಿಬಿ) ಕಾಲು ಬಾಯಿ ಜ್ವರದ ಪ್ರಾದೇಶಿಕ ಕೇಂದ್ರದ ಪ್ರಬಾರ ವಿಜ್ಞಾನಿ ಡಾ.ರವೀಂದ್ರ ಹೆಗ್ಡೆ ತಿಳಿಸಿದರು.

ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಕಾಲು ಬಾಯಿ ಜ್ವರಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಈ ಕಾಯಿಲೆ ಕೇವಲ ಮೃಗಾಲಯಗಳಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ದಕ್ಷಿಣ ಭಾಗ ದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ಮೃಗಾಲಯಗಳು, ರಾಷ್ಟೀಯ ಉದ್ಯಾನಗಳಲ್ಲಿ ಹರಡಿದಾಗ ಅದು ಅಷ್ಟೇನು ಪರಿಣಾಮ ಬೀರುವುದಿಲ್ಲ’ ಎಂದರು.

‘ಜ್ವರಪೀಡಿತ ಪ್ರಾಣಿಗಳನ್ನು ಪತ್ತೆ ಹಚ್ಚಿ ಪ್ರತ್ಯೇಕಿಸುವ ಕಾರ್ಯ ಪ್ರಗತಿ ಯಲ್ಲಿದೆ. ಕರಡಿಗಳು ಬೇಗನೆ ಕಾಯಿಲೆ ಹರಡುವ ಗುಣ ಹೊಂದಿರುವುದರಿಂದ, ಅವುಗಳನ್ನು ಕೊಲ್ಲಲು ಅನುಮತಿ ನೀಡುವಂತೆ ವನ್ಯಜೀವಿಗಳ ವಾರ್ಡನ್‌ ಬಳಿ ಮನವಿ ಮಾಡಲಾಗುವುದು’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ರಂಗೇಗೌಡ ಹೇಳಿದರು.

ಉದ್ಯಾನದ ಸುತ್ತಮುತ್ತಲಿನ ಐದು ಕಿಲೋ ಮೀಟರ್‌ ವ್ಯಾಪ್ತಿಯ ಹಳ್ಳಿಗಳ ಜನರಲ್ಲಿ ಎರಡು ತಿಂಗಳ ಹಿಂದೆ ಕಾಲುಬಾಯಿ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಆ ರೋಗ ಹೇಗೆ ಹರಡಿತ್ತು ಎಂಬುದು ಗೊತ್ತಿಲ್ಲ. ಆ ಹಳ್ಳಿಗಳಿಂದ ಬರುತ್ತಿದ್ದ ಉದ್ಯಾನದ ನೌಕರರಿಗೂ ಆ ರೋಗದ ಸೋಂಕು ತಗುಲಿತ್ತು. ಕೆಂಗೇರಿ, ಬಿಡದಿ, ರಾಮ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಜಾನುವಾರುಗಳಿಗೂ ಕಾಲುಬಾಯಿ ಜ್ವರ ಬಂದಿತ್ತು ಎಂದು ಮಾಹಿತಿ ನೀಡಿದರು.

ರೋಗದ ಹತೋಟಿಗಾಗಿ ಉದ್ಯಾನದ ಸುತ್ತಮುತ್ತಲ 36 ಗ್ರಾಮಗಳಲ್ಲಿ ನಿಗಾ ವಹಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣ ದಲ್ಲಿದೆ. ಸಫಾರಿ ವೇಳೆ ಪ್ರಾಣಿಗಳಿಗೆ ಚುಚ್ಚುಮದ್ದು ಹಾಕಲಾಗುತ್ತಿದೆ. ಈ ವರೆಗೆ 20 ಪ್ರಾಣಿಗಳಿಗೆ ಕಾಲು ಬಾಯಿ ಜ್ವರದ ಸೋಂಕು ತಗುಲಿರುವುದು ಗೊತ್ತಾಗಿದೆ ಎಂದರು.

‘ಜ್ವರ ಹರಡುವಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ಅರಣ್ಯ ಇಲಾಖೆ ಮಂಗಳವಾರ ಪಶು ವೈದ್ಯರ ಸಭೆ ನಡೆಸಿತು. ಸಭೆ ನಂತರ ಉದ್ಯಾನದ ಪಶು ವೈದ್ಯ ಡಾ.ಚಿಟ್ಟಿಯಪ್ಪ ಅವರ ನೇತೃತ್ವದಲ್ಲಿ ಹತ್ತು ಮಂದಿ ವೈದ್ಯರನ್ನೊಳಗೊಂಡ ತಂಡ ಉದ್ಯಾನದ 121 ಎಕರೆ ಪ್ರದೇಶದಲ್ಲಿ ಚುಚ್ಚುಮದ್ದು ಗನ್‌ನೊಂದಿಗೆ ಸಫಾರಿ ನಡೆಸಿದೆ. ಪ್ರಾಣಿಗಳು ಆಹಾರ ಸೇವಿಸಿದ ಸ್ಥಳದಲ್ಲಿ ಸಿಬ್ಬಂದಿ ಫ್ಲೇಮ್‌ ಗನ್‌ ಮೂಲಕ ಸೋಂಕು ನಿವಾರಕ ಔಷಧವನ್ನು ಸಿಂಪಡಿಸಿದ್ದಾರೆ’ ಎಂದು ಉದ್ಯಾನದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.