ADVERTISEMENT

ಫೆ.10ರ ವರೆಗೆ ನಾದಜ್ಯೋತಿ ಸಂಗೀತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:55 IST
Last Updated 7 ಫೆಬ್ರುವರಿ 2019, 18:55 IST
ನಾದಜ್ಯೋತಿ ಸಂಗೀತಾ ಸಭಾ ಟ್ರಸ್ಟ್‌ ಹಾಗೂ ಮಲ್ಲೇಶ್ವರ ಆರ್ಯವೈಶ್ಯ ಸಂಘದಿಂದ ಆಯೋಜಿಸಿದ್ದ ‘54ನೇ ಸಂಗೀತ ಸಂಭ್ರಮ’ದಲ್ಲಿ ಬೆಂಗಳೂರು ಆರ್.ಮಂಜುನಾಥ್ (ಸ್ಯಾಕ್ಸೋಫೋನ್) ವೃಂದದವರು ಸಂಗೀತ ಕಛೇರಿ ನಡೆಸಿಕೊಟ್ಟರು
ನಾದಜ್ಯೋತಿ ಸಂಗೀತಾ ಸಭಾ ಟ್ರಸ್ಟ್‌ ಹಾಗೂ ಮಲ್ಲೇಶ್ವರ ಆರ್ಯವೈಶ್ಯ ಸಂಘದಿಂದ ಆಯೋಜಿಸಿದ್ದ ‘54ನೇ ಸಂಗೀತ ಸಂಭ್ರಮ’ದಲ್ಲಿ ಬೆಂಗಳೂರು ಆರ್.ಮಂಜುನಾಥ್ (ಸ್ಯಾಕ್ಸೋಫೋನ್) ವೃಂದದವರು ಸಂಗೀತ ಕಛೇರಿ ನಡೆಸಿಕೊಟ್ಟರು   

ಬೆಂಗಳೂರು:ನಾದಜ್ಯೋತಿ ಸಂಗೀತಾ ಸಭಾ ಟ್ರಸ್ಟ್‌ ಹಾಗೂ ಮಲ್ಲೇಶ್ವರ ಆರ್ಯವೈಶ್ಯ ಸಂಘ ಜಂಟಿಯಾಗಿ ‘54ನೇ ಸಂಗೀತ ಸಂಭ್ರಮ’ಆಯೋಜಿಸಿವೆ. ಈ ಸಂಗೀತ ಉತ್ಸವವು ಫೆ.10ರ ವರೆಗೆ ನಡೆಯಲಿದೆ.

ಫೆ.8ರ ಸಂಜೆ 6.30ಕ್ಕೆ ಐಶ್ವರ್ಯ ಶ್ರೀನಿವಾಸನ್‌ ಗಾಯನ ಇರಲಿದೆ. ಎಚ್‌.ಎಂ.ಸ್ಮಿತಾ (ಪಿಟೀಲು), ಸಿ.ಚೆಲುವರಾಜ್‌ (ಮೃದಂಗ), ಎಂ.ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್‌) ಸಾಥ್‌ ನೀಡಲಿದ್ದಾರೆ.

ಫೆ.9ರ ಸಂಜೆ 5ರಿಂದ ‘ಖಂಜರಿ ವ್ಯಾಸ ಮಂಜರಿ’ ವಿಶೇಷ ತಾಳವಾದ್ಯ ಕಛೇರಿ ಇದೆ. ವಿದ್ವಾಂಸರಾದ ಸಿ.ಪಿ.ವ್ಯಾಸವಿಠಲ, ಜಿ.ಗುರುಪ್ರಸನ್ನ ನಡೆಸಿಕೊಡಲಿದ್ದಾರೆ. ಸಂಜೆ 7ರಿಂದ ವಿದ್ವಾನ್‌ರಾದ ರಾಮನಗರ ಬಿ.ಎಸ್‌.ನಾರಾಯಣ ಅಯ್ಯಂಗಾರ್‌, ರುದ್ರಪಟ್ಟಣಂ ಎಸ್‌.ರಮಾಕಾಂತ್‌ ಹಾಗೂ ಎಂ.ಭಾಗ್ಯಲಕ್ಷ್ಮಿ ಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಫೆ.10ರಂದು ಸಂಜೆ 6.30ಕ್ಕೆ ಎಸ್‌.ಮಹತಿ ಅವರು ಗಾನಸುಧೆ ಹರಿಸಲಿದ್ದಾರೆ. ಬಿ.ಕೆ.ರಘು (ಪಿಟೀಲು), ಎ.ಎಸ್‌.ಎನ್‌.ಸ್ವಾಮಿ (ಖಂಜಿರ) ವಾದ್ಯವೃಂದದಲ್ಲಿ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.