ADVERTISEMENT

ಬಂದ್ ನಡುವೆಯೂ ಕಸ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:20 IST
Last Updated 6 ಅಕ್ಟೋಬರ್ 2012, 19:20 IST

ಬೆಂಗಳೂರು: ಕಸದ ಗೂಡಾಗಿದ್ದ ಕೆ.ಆರ್.ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ಅಂತಿಮವಾಗಿ ಶನಿವಾರ ಕಾಲ ಕೂಡಿಬಂತು. ಬಂದ್ ಅನ್ನು ಲೆಕ್ಕಿಸದೇ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು.

ನಗರದ ಕೇಂದ್ರ ಭಾಗದಲ್ಲಿರುವ ಮಾರುಕಟ್ಟೆಗೆ ನಿತ್ಯ ಸಾವಿರಾರು ಗ್ರಾಹಕರು ಭೇಟಿ ನೀಡುತ್ತಾರೆ. ಆದರೂ ಕೊಳೆತ ತರಕಾರಿ, ಹಣ್ಣುಗಳು, ಬಾಳೆಗೊನೆಗಳು, ಹೂವು ಸೇರಿದಂತೆ ತ್ಯಾಜ್ಯದ ರಾಶಿ ಹಾಗೇ ಬಿದ್ದು ಗಬ್ಬು ನಾರುತ್ತಿತ್ತು. 118 ಪೌರಕಾರ್ಮಿಕರ ತಂಡವು ಮಾರುಕಟ್ಟೆಯ ಮೂಲೆಮೂಲೆಯಲ್ಲಿದ್ದ ಕಸವನ್ನು ತೆರವುಗೊಳಿಸಿತು. ಇದರಿಂದ ಪ್ರೇರಣೆಗೊಂಡ ಅಂಗಡಿ ಮಾಲೀಕರು ಸಹ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

ಮಾರುಕಟ್ಟೆಯಿಂದ 80 ಟನ್‌ಗಳಷ್ಟು ಕಸವನ್ನು ತೆರವುಗೊಳಿಸಲಾಯಿತು. ನಗರದಲ್ಲಿ ಬಂದ್ ಪ್ರಯುಕ್ತ ಮಾರುಕಟ್ಟೆ ಪ್ರದೇಶದಲ್ಲಿ ಜನರ ಸಂಖ್ಯೆ ಕಡಿಮೆ ಇದ್ದ ಕಾರಣ ಸ್ವಚ್ಛತಾ ಕಾರ್ಯಕ್ಕೆ ಅನುಕೂಲವಾಯಿತು~ ಎಂದು ಉಪ ಆಯುಕ್ತ (ಮಾರುಕಟ್ಟೆ) ತಿಳಿಸಿದರು.

`ಇನ್ನು ಮುಂದೆ ಪಾಲಿಕೆಯಿಂದ ಹಮ್ಮಿ ಕೊಳ್ಳುವ ಕಾರ್ಯದಲ್ಲಿ ಅಂಗಡಿ ಮಾಲೀಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು~ ಎಂದು ಅವರು ಮನವಿ ಮಾಡಿದರು.  ಇದೇ ವೇಳೆ ಪಾಲಿಕೆಯ ಅಧಿಕಾರಿಗಳು ಅಂಗಡಿಗಳಿಗೆ ತೆರಳಿ ಕಸವಿಂಗಡಣೆ ಕುರಿತು ತಿಳಿವಳಿಕೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.