ADVERTISEMENT

ಬಡವರ ಏಳಿಗೆಗೆ ಶ್ರಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ಪೀಣ್ಯ ದಾಸರಹಳ್ಳಿ: ‘ರಾಜಕೀಯದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದರ ನಡುವೆಯೂ ಜನಪ್ರತಿನಿಧಿಗಳು ಸಹಾಯ ಮಾಡುವ ಗುಣ ಬೆಳೆಸಿಕೊಂಡು ಬಡವರ ಏಳಿಗೆಗೆ ಶ್ರಮಿಸಬೇಕು’ ಎಂದು ಕೆಪಿಸಿಸಿ ಸದಸ್ಯರಾದ ಸೌಂದರ್ಯ ಮಂಜಪ್ಪ ಸಲಹೆ ಮಾಡಿದರು.

ದಾಸರಹಳ್ಳಿ ಕ್ಷೇತ್ರದ ಪೀಣ್ಯ ಕೈಗಾರಿಕಾ ನಗರದ ಶ್ರೀಗಂಧ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೊಕ್ಕಸಂದ್ರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಗವಿಕಲ ಕಾರ್ಮಿಕ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಅಂಗವಿಕಲರು ಆತ್ಮಸ್ಥೈರ್ಯದಿಂದ ಹಾಗೂ ಸ್ವಾವಲಂಬಿಗಳಾಗಿ ಬದುಕಲು ಅವರಲ್ಲಿ ಸ್ಫೂರ್ತಿ ತುಂಬುವುದರ ಜೊತೆಗೆ ನಾವೆಲ್ಲ ಅಗತ್ಯ ಸಹಕಾರ ನೀಡಿ ಮಾನವೀಯತೆ ಮೆರೆಯಬೇಕಾಗಿದೆ’ ಎಂದರು.
ಚೊಕ್ಕಸಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಲೋಕೇಶ್ ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಮಿಕರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಲು ಮುಂದಾಗಬೇಕು’ ಎಂದರು.

ಮುಖಂಡರಾದ ಭಾಸ್ಕರಾಚಾರ್, ಸುಕೀರ್ತಿ, ನಟರಾಜ್ ಕುಮಾರ್, ರೀಟಾ ವಿಜಯ್, ಶಿವಣ್ಣ, ಅಶ್ವತ್ಥಪ್ಪ, ಕೃಷ್ಣಮೂರ್ತಿ, ಕ್ರೇಸಿ ಥಾಮಸ್, ಭಾಗ್ಯಮ್ಮ, ಸಬೀರ್ ಅಹಮದ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.