ADVERTISEMENT

ಬಸ್ ಡಿಪೊ ನಿರ್ಮಾಣಕ್ಕೆ ಚಾಲನೆ

ನಾಗರಬಾವಿ 2ನೇ ಹಂತದಲ್ಲಿ ನೂತನ ಘಟಕ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST
ನಾಗರಬಾವಿ 2ನೇ ಹಂತದಲ್ಲಿ ನೂತನ ಬಸ್ ಘಟಕ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಭಾನುವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಶಾಸಕ ಎಂ.ಮುನಿರತ್ನ, ಮೇಯರ್ ಬಿ.ಎಸ್‌.ಸತ್ಯನಾರಾಯಣ ಮೊದಲಾದವರು ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ನಾಗರಬಾವಿ 2ನೇ ಹಂತದಲ್ಲಿ ನೂತನ ಬಸ್ ಘಟಕ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ಭಾನುವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಶಾಸಕ ಎಂ.ಮುನಿರತ್ನ, ಮೇಯರ್ ಬಿ.ಎಸ್‌.ಸತ್ಯನಾರಾಯಣ ಮೊದಲಾದವರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಾಗರಬಾವಿ 2ನೇ ಹಂತದಲ್ಲಿ  ನಿರ್ಮಿಸಲಾಗುತ್ತಿರುವ ನೂತನ ಬಸ್ ಘಟಕ (ಡಿಪೊ) ಮತ್ತು ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 3.30 ಎಕರೆ ವಿಸ್ತೀರ್ಣದಲ್ಲಿ  ತಲೆ ಎತ್ತಲಿರುವ ₨ 7 ಕೋಟಿ ವೆಚ್ಚದ ನೂತನ ಬಸ್ ಘಟಕ ಮತ್ತು ನಿಲ್ದಾಣ ಮುಂದಿನ ಹತ್ತು ತಿಂಗಳಲ್ಲಿ ಕಾರ್ಯಾಚರಣೆಗೆ ಲಭ್ಯವಾಗಲಿದೆ ಎಂದು ಹೇಳಿದರು.

ಈ ಹೊಸ ನಿಲ್ದಾಣದಿಂದ ಬಸ್‌ಗಳು  ಪ್ರತಿನಿತ್ಯ 80 ಮಾರ್ಗಗಳಲ್ಲಿ 602 ಟ್ರಿಪ್‌ಗಳಷ್ಟು ಸಂಚಾರ ನಡೆಸಲಿವೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಸಿಬ್ಬಂದಿಗಳಿಗೆ ಅನುಕೂಲ­ವಾಗುವಂತೆ ಶಿವನಪುರ, ಗುಂಜೂರು ಮತ್ತು ಕೊಡತಿ ಬಸ್ ಘಟಕಗಳಿಗೆ ಹೊಂದಿಕೊಂಡಂತೆ 120 ವಸತಿಗೃಹ­ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಮೇಯರ್ ಬಿ.ಎಸ್‌.ಸತ್ಯನಾರಾ­ಯಣ  ಮಾತನಾಡಿ,  ನರಸಿಂಹರಾಜ ಕಾಲೋನಿಯಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಇದೆ ಎಂದರು.

ಶಾಸಕ ಎಂ.ಮುನಿರತ್ನ ಅವರು ಮಾತನಾಡಿ,   ‘ಮಹಾನಗರ ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಏಕರೂಪದ ಅನುದಾನ ಜಾರಿಯಲ್ಲಿದೆ. ಕ್ಷೇತ್ರಗಳ ಜನಸಂಖ್ಯೆ ಮತ್ತು ವ್ಯಾಪ್ತಿಯನ್ನು  ಆಧರಿಸಿ ಅನುದಾನವನ್ನು ಹಂಚಿಕೆ ಮಾಡುವುದರಿಂದ ಕ್ಷೇತ್ರಗಳ ಅಭಿವೃದ್ಧಿಯನ್ನು ಸಮರ್ಪಕ­ವಾಗಿ ಮಾಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯರಾದ ರಾಮ­ಚಂದ್ರೇಗೌಡ, ಬಿಎಂಟಿಸಿ ವ್ಯವ­ಸ್ಥಾಪಕರಾದ ನಿರ್ದೇಶಕ ಅಂಜುಂ ಪರ್ವೇಜ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.