ADVERTISEMENT

ಬೆಂಗಳೂರು ರಸ್ತೆಯ ಗುಂಡಿ ತೋರಿಸಲು ಮುಂಬೈ ರಸ್ತೆಯ ಚಿತ್ರ ಬಳಸಿದ ಬಿಜೆಪಿ!

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 14:01 IST
Last Updated 7 ಆಗಸ್ಟ್ 2017, 14:01 IST
ಬೆಂಗಳೂರು ರಸ್ತೆಯ ಗುಂಡಿ  ತೋರಿಸಲು ಮುಂಬೈ ರಸ್ತೆಯ ಚಿತ್ರ ಬಳಸಿದ  ಬಿಜೆಪಿ!
ಬೆಂಗಳೂರು ರಸ್ತೆಯ ಗುಂಡಿ ತೋರಿಸಲು ಮುಂಬೈ ರಸ್ತೆಯ ಚಿತ್ರ ಬಳಸಿದ ಬಿಜೆಪಿ!   

ಬೆಂಗಳೂರು: ಬೆಂಗಳೂರು ಮಹಾನಗರ ರಸ್ತೆಗಳು ಸರಿ ಇಲ್ಲ ಎಂದು ಬಿಂಬಿಸಲು ಹೋಗಿ ಕರ್ನಾಟಕ ಬಿಜೆಪಿಯ ಐಟಿ ಘಟಕ ಮುಂಬೈ ರಸ್ತೆಯ ಚಿತ್ರ ಪ್ರಕಟಿಸಿ ವಿವಾದಕ್ಕೆ ಗುರಿಯಾಗಿದೆ.

ಕರ್ನಾಟಕ ಬಿಜೆಪಿಯ ಐಟಿ ವಿಭಾಗವು ‘ಬೆಂಗಳೂರಿನಲ್ಲಿನ ರಸ್ತೆಗಳು ಗುಂಡಿಗಳಿಂದ ತುಂಬಿದ್ದು  ರಸ್ತೆಗಳು ಸರಿ ಇಲ್ಲ ಎಂದು ತೋರಿಸಲು ಮುಂಬೈ ರಸ್ತೆಯೊಂದರ ಚಿತ್ರವನ್ನು ಭಾನುವಾರ ಟ್ವೀಟ್‌ ಮಾಡಿತ್ತು.

ಮುಂಬೈನ ಅರೋಲಿಯ 6ನೇ ಹಂತದಲ್ಲಿರುವ ಗುಂಡಿಗಳಿರುವ ರಸ್ತೆಯನ್ನು ಬೆಂಗಳೂರಿನ ರಸ್ತೆ ಎಂದು ಬಿಂಬಿಸುವ ಪ್ರಯತ್ನ ಬಿಜೆಪಿ ಮಾಡಿತ್ತು. ಇದನ್ನು ಗಮನಿಸಿದ ನೆಟ್ಟಿಗರು ಇದು ಮುಂಬೈ ಮಹಾನಗರದ ರಸ್ತೆ ಎಂದು ಮರು ಟ್ವೀಟ್‌ ಮಾಡುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

ಟ್ವೀಟ್‌ ಬರಹ ಹೀಗಿತ್ತು...
ಜನ ಚಂದ್ರನ ಮೇಲೆ ನಡೆಯುತ್ತಿದ್ದಾರೆ ಎಂಬುದನ್ನು ನಾಸಾ ಪತ್ತೆ ಹಚ್ಚಿದೆ. ಆದರೆ ಇದು ಬೆಂಗಳೂರಿನ ರಸ್ತೆ ಎಂಬುದನ್ನು ಬಿಬಿಎಂಪಿ  ಖಚಿತಪಡಿಸಿದೆ’ ಎಂದು ಬರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.