
ದೊಡ್ಡಬಳ್ಳಾಪುರ: ‘ದ.ರಾ. ಬೇಂದ್ರೆ ಯವರ ಜೀವನವೇ ಒಂದು ಮಹಾ ಕಾವ್ಯ. ಅವರು ಕನ್ನಡ ನುಡಿಯನ್ನು ಕಾವ್ಯವನ್ನಾಗಿಸಿದವರು’ ಎಂದು ಸಾಹಿತಿ ಡಾ.ಜಿ.ಕೃಷ್ಣಪ್ಪ ಹೇಳಿದರು.
ನಗರದ ಪುರಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ನವೋದಯ ಕವಿ ಕಾವ್ಯ ಗಾಯನ ಚಿಂತನಮಾಲೆಯಲ್ಲಿ ವರಕವಿ ದ.ರಾ. ಬೇಂದ್ರೆ ಅವರ ಕಾವ್ಯಸಿರಿ ಕುರಿತು ಅವರು ಮಾತನಾಡಿದರು.
‘ಬೇಂದ್ರೆಯವರ ಕವನಗಳು ಕಾವ್ಯ ಗುಣದಲ್ಲಿ ಉನ್ನತಮಟ್ಟ ಹೊಂದಿವೆ. ಅನುಭವದ ಆಳದಿಂದ ಮೂರ್ತಗೊಂಡ ಬೇಂದ್ರೆಯವರ ಕವಿತೆಗಳು ವಾಚಕರ ಮನಸ್ಸನ್ನು ಸಹಜವಾಗಿಯೇ ಗೆಲ್ಲುತ್ತವೆ’ ಎಂದರು.
‘ಬೇಂದ್ರೆಯವರ ಕಾವ್ಯ ಭಾವಗೀತೆ ಯುಗವನ್ನು, ಜಾನಪದವನ್ನು ಜನ ಪ್ರಿಯಗೊಳಿಸಿತು. ಬೇಂದ್ರೆ ಜನಪದದ ಸತ್ವವನ್ನು ಹೀರಿಗೊಂಡು ಅದನ್ನು ತಮ್ಮ ಕವನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಬೇಂದ್ರೆ ಯವರ ಕಾವ್ಯದ ಹರವು ಬೆರಗುಗೊಳಿ ಸುವಂತಹುದು. ಮಾನವನ ಅಸ್ತಿತ್ವದ ವಿವಿಧ ಸ್ತರಗಳ ಅನುಭವಗಳು ಅವರ ಕವನಗಳ ವಸ್ತುಗಳಾಗಿವೆ. ಭಾಷೆಯ ಪದಸಂಪತ್ತು ಮತ್ತು ನಾದ ಸಂಪತ್ತು ಎರಡನ್ನು ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸಿದರು’ ಎಂದರು.
‘ಸಾಮಾನ್ಯರ ಮಿಡಿತ- ತುಡಿತ ಗಳನ್ನು ಕವನಗಳಲ್ಲಿ ಮೂಡಿಸಿದ ಮಹತ್ವ ದ ಕವಿಗಳಲ್ಲಿ ಬೇಂದ್ರೆಯವರು ಅಗ್ರ ಗಣ್ಯರು. ಪ್ರಕೃತಿ, ಆಧ್ಯಾತ್ಮ, ಸಾಮಾಜಿಕ ಇವುಗಳ ಜೊತೆಗೆ ಶಾಂತಿ, ಪ್ರೀತಿಗಳ ಬಗ್ಗೆ ಒತ್ತಿ ಹೇಳಿದವರು. ಇಂತಹ ಕವಿಗಳನ್ನು ಕವನಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಓದಬೇಕು. ಆದರೆ ಇತ್ತೀಚಿನ ಶಾಲಾ ಪಠ್ಯಗಳಲ್ಲಿ ಕಳಪೆ ಪದ್ಯಗಳನ್ನು ಅಳವಡಿ ಸುತ್ತಿರುವುದು ವಿಷಾದನೀಯ. ಮೌಲ್ಯ ಯುತ ಕವನಗಳ ಓದಿನಿಂದ ಮಕ್ಕಳಲ್ಲಿ ಮೌಲ್ಯಯುತ ಚಿಂತನೆಗಳು ಹೆಚ್ಚಲಿವೆ’ ಎಂದರು.
‘ಕಾವ್ಯಸಿರಿ ಚಿಂತನಾ ಮಾಲೆ ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ಕರ್ನಾಟಕದ ಏಕೀಕರಣದ ನಂತರವು ಪ್ರಾದೇಶಿಕ ತಾರತಮ್ಯವಿದೆ. ಸಮಸ್ತ ಕನ್ನಡಿಗರು ಸಂಘಟಿತರಾಗಬೇಕು. ಜಾಗತೀಕರಣ ದ ಸಂದರ್ಭದಲ್ಲಿ ಮಾತೃ ಭಾಷೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇಂತಹ ಸಂದರ್ಭದಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆ ತನ್ನ ಅಸ್ಥಿತ್ವ ಉಳಿಸಿ ಕೊಂಡಿದೆ. ಕನ್ನಡ ಭಾಷೆಯೂ ಕನ್ನಡಿ ಗರ ಬದುಕನ್ನು ಕಟ್ಟಿಕೊಳ್ಳುವ ಮತ್ತು ಮಕ್ಕಳ ಭವಿಷ್ಯವನ್ನು ರೂಪಿಸುವಂತಾ ಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ಸಂತೋಷ್ ಸಕ್ಕರೆಗೊಲ್ಲಹಳ್ಳಿ ಅವರ ಮನ ಮಿಡಿ ದಾಗ ಕವನಸಂಕಲನ ಬಿಡುಗಡೆ ಮತ್ತು ನೂತನ ನಗರಸಭಾ ಸದಸ್ಯರಿಗೆ ಅಭಿ ನಂದನೆ ನಡೆಯಿತು. ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್. ಹನು ಮತೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್, ಮಾಜಿ ಅಧ್ಯಕ್ಷ ರಾದ ನಾಗಪ್ರಿಯ, ಚಿ.ಮಾ.ಸುಧಾಕರ, ರಾಮಲಿಂಗೇಶ್ವರಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಕನ್ನಡ ಸಾಹಿತ್ಯ ಪರಿಷತ್ ಪದಾಧಿ ಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.