ADVERTISEMENT

ಬ್ಯೂಟಿಪಾರ್ಲರ್‌ಗಳಲ್ಲಿ ಅಪಾಯಕಾರಿ ಪುಡಿ ಬಳಕೆ ಪತ್ತೆ

₹13 ಲಕ್ಷ ಮೌಲ್ಯದ ಸೌಂದರ್ಯ ವರ್ಧಕ ಜಪ್ತಿ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:28 IST
Last Updated 17 ಮೇ 2018, 19:28 IST

ಬೆಂಗಳೂರು: ಜಯನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ₹13 ಲಕ್ಷ ಮೌಲ್ಯದ ನಿಷೇಧಿತ ಸೌಂದರ್ಯ ವರ್ಧಕವನ್ನು ಜಪ್ತಿ ಮಾಡಿದ್ದಾರೆ.

ಚರ್ಮದ ಬಣ್ಣ ಬಿಳುಪು ಮಾಡುವ ಉದ್ದೇಶಕ್ಕಾಗಿ ನಗರದ ಬ್ಯೂಟಿಪಾರ್ಲರ್‌ಗಳಲ್ಲಿ  ‘ಸ್ಕಿನ್ ವೈಟ್ನಿಂಗ್ ಪೌಡರ್’ ಹೆಸರಿನ ಸೌಂದರ್ಯ ವರ್ಧಕವನ್ನು ಬಳಸಲಾಗುತ್ತಿತ್ತು. ಇದು ಅಪಾಯಕಾರಿ ಪುಡಿ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.

ಈ ವರ್ಧಕವನ್ನು ಚೀನಾ, ಮಲೇಷ್ಯಾದಿಂದ ಸಮುದ್ರದ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ವಾಹನಗಳ ಮೂಲಕ ಬೆಂಗಳೂರಿಗೆ ತರಲಾಗಿತ್ತು. ನಗರದ ಬ್ಯೂಟಿ ಪಾರ್ಲರ್‌ಗಳಿಗೆ ಈ ಪುಡಿಯನ್ನು ಸರಬರಾಜು ಮಾಡಲಾಗುತ್ತಿತ್ತು. ಇತ್ತೀಚೆಗೆ ಆಹಾರದ ಪುಡಿ ಸೋಗಿನಲ್ಲಿ ಪ್ಯಾಕ್‌ ಮಾಡಿದ್ದ 100 ಬಾಟಲ್‌ಗಳಲ್ಲಿ ಈ ಸೌಂದರ್ಯ ವರ್ಧಕವನ್ನು ತರಿಸಲಾಗಿತ್ತು. ಅವುಗಳೆಲ್ಲವನ್ನೂ ಜ‍ಪ್ತಿ ಮಾಡಿದ್ದೇವೆ ಎಂದರು.

ADVERTISEMENT

ಪುಡಿ ಮಾರಾಟ ಜಾಲ ಹಲವು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯವಾಗಿದೆ. ಬೆಂಗಳೂರಿನ ಬಹುಪಾಲು ಬ್ಯೂಟಿಪಾರ್ಲರ್‌ಗಳಲ್ಲಿ ಇದನ್ನು ಬಳಸುತ್ತಿರುವ ಮಾಹಿತಿ ಇದೆ. ಇದರಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಶಂಕೆಯೂ ಇರುವುದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.