ADVERTISEMENT

ಭೂಮಿ ಕಬಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ದಲಿತ ಸೇವಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು
ದಲಿತ ಸೇವಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊರೆಸಾನಿಪಾಳ್ಯ ಗ್ರಾಮದಲ್ಲಿ ಆರ್.ಜೆ.ಶಾಂತಾ ಮತ್ತು ಅವರ ಕುಟುಂಬದವರು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ದಲಿತ ಸೇವಾ ಸಂಘದ ಸದಸ್ಯರು ಬುಧವಾರ ಪುರಭವನದ ಬಳಿ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಜೆ.ಚಂದ್ರಪ್ಪ ಮಾತನಾಡಿ, ‘ಗ್ರಾಮದ ಸರ್ವೆ ಸಂಖ್ಯೆ 151/3, 152/8ಎ ಮತ್ತು 154/ 11ಪಿ1ನಲ್ಲಿ ಕಾವೇರಮ್ಮ ಎಂಬುವರಿಗೆ ಸೇರಿದ  2 ಎಕರೆ 10 ಗುಂಟೆ ಜಮೀನು ಇದೆ’ ಎಂದರು.

‘ಶಾಂತಾ ಅವರು ನಕಲಿ ದಾಖಲೆ ಸೃಷ್ಟಿಸಿ 49 ಗುಂಟೆ ಭೂಮಿ ಕಬಳಿಸಿದ್ದಾರೆ. ಅದರಲ್ಲಿ ಈಗಾಗಲೇ 9 ಗುಂಟೆಯನ್ನು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಈ ವೇಳೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.