ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:45 IST
Last Updated 9 ಜೂನ್ 2011, 19:45 IST

ಹೊಸಕೋಟೆ: ಉತ್ತಮ ಸಮಾಜ ನಿರ್ಮಿಸುವಲ್ಲಿ ಪೋಷಕರು ತಪ್ಪದೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವಂತೆ ವಿಶ್ವಒಕ್ಕಲಿಗರ ಮಹಾಸಂಸ್ಥಾನ ಮಠದ ಮಠಾಧೀಶ ಕುಮಾರ ಚಂದ್ರಶೇಖರ ಸ್ವಾಮಿಜಿ ಬುಧವಾರ ಇಲ್ಲಿ ಹೇಳಿದರು.

ತಾಲ್ಲೂಕಿನ ಕೆ.ಸತ್ಯವಾರ ಗ್ರಾಮದಲ್ಲಿ ಲಕ್ಷೆನಾರಾಯಣಸ್ವಾಮಿ ದೇವಾಲಯ ಜೀರ್ಣೋದ್ಧಾರದ ಸಮಾರಂಭವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, ಪರ ಸ್ಪರ ಪ್ರೀತಿ ವಿಶ್ವಾಸ ನೆಲಸುವಲ್ಲಿ  ಗ್ರಾಮ ಗಳಲ್ಲಿ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯುವಂತಾಗಬೇಕು, ತಾಲ್ಲೂಕಿನ 30 ದೇವಾಲಯಗಳ ಅಭಿವೃದ್ಧಿಗಾಗಿ ಆರಾಧನಾ ಯೋಜನೆ ಮೂಲಕ ರೂ 16 ಲಕ್ಷ ನೀಡಲಾಗಿದೆ ಎಂದರು.

ಚಿಕ್ಕಬಳ್ಳಾಪುರದ ಶಿವಸಾಯಿಬಾಬಾ ಸಾನಿಧ್ಯ ವಹಿಸಿದ್ದರು. ಒಕ್ಕಲಿಗರ ಸಂಘ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಜಿ.ಪಂ.ನ ಉಪಾಧ್ಯಕ್ಷೆ ಶಾಂತಮ್ಮ,     ಗ್ರಾ.ಪಂ. ಅಧ್ಯಕ್ಷೆ ಕಾಂತಮ್ಮ, ದೇವಾ ಲ ಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಡಿ.ಸತ್ಯನಾರಾಯಣರಾವ್, ಎಸ್.ಪಿ. ಕೃಷ್ಣಪ್ಪ, ಎಸ್.ಎಸ್.ಲಕ್ಷ್ಮೆಶ ಇನ್ನಿತರರು  ಹಾಜರಿದ್ದರು. ಎಸ್.ಎನ್. ಹಿರಣ್ಯಾ ಚಾರ್ ಸ್ವಾಗತಿಸಿದರು.

ಇದಕ್ಕೆ ಮುನ್ನ ಸಚಿವರು ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿ, ಕಾಂಪೌಂಡ್ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.