ADVERTISEMENT

ಮಕ್ಕಳ ಹೃದಯ ಚಿಕಿತ್ಸೆ: ರೋಟರಿ ನೆರವಿಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ನೆಲಮಂಗಲ:  ಹೃದ್ರೋಗದಿಂದ ಬಳಲುತ್ತಿದ್ದ ಚಿಕ್ಕ ಮಕ್ಕಳಾದ ಮಲ್ಲಾರ ಕುಡಿ ಮತ್ತು ಕೀರ್ತನ ಎಂಬುವರ ಹೃದಯ ಚಿಕಿತ್ಸೆಗೆ ಸಹಾಯ ಹಸ್ತ ನೀಡಿ ಗುಣಮುಖರನ್ನಾಗಿಸಿದ ನೆಲಮಂಗಲ ರೋಟರಿ ಸಂಸ್ಥೆಯು ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಗವರ್ನರ್ ಎಸ್. ನಾಗೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

 ಸ್ಥಳೀಯ ರೋಟರಿ ಸಂಸ್ಥೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಆಯ್ದ ಶಾಲಾ ಕಾಲೇಜುಗಳಿಗೆ ಕುಡಿಯುವ ನೀರಿನ ಫಿಲ್ಟರ್, ಬ್ಯಾಗ್, ನೋಟ್ ಪುಸ್ತಕ ಹಾಗೂ ಇತರ ಪರಿಕರಗಳನ್ನು ನೀಡಿದ ವಿವರಗಳನ್ನು ಪರಿಶೀಲಿಸಿದ ಅವರು, ಸಂಸ್ಥೆಯು ಜನಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಮುಂದಿನ ದಿನಗಳಲ್ಲಿ ಇನ್ನರ್‌ವ್ಹೀಲ್, ಇಂಟರ‌್ಯಾಕ್ಟ್ ಕಿಂಡರ್ ಕ್ಲಬ್‌ಗಳನ್ನು ಪ್ರಾರಂಭಿಸಿ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ ಎಂದು ಅಧ್ಯಕ್ಷ ಇ.ಟಿ.ಕೆ.ರಾಜು ತಿಳಿಸಿದರು.

 ಕಾರ್ಯದರ್ಶಿ ಮುನಿರಾಜು, ಸಹಾಯಕ ಜಿಲ್ಲಾ ಗವರ್ನರ್ ಬಿ.ಎ.ಶಿವಕುಮಾರ್, ಕಾರ್ಯದರ್ಶಿ ಡಾ.ಸಮೀರ್ ಮಾತನಾಡಿದರು.

ಕಾರ್ಯದರ್ಶಿ ಮುನಿರಾಜು, ಮಾಜಿ ಅಧ್ಯಕ್ಷರಾದ ಪೃಥ್ವಿರಾಜ್, ಎಚ್.ಜಿ.ರಾಜು ವೇದಿಕೆಯಲ್ಲಿದ್ದರು.
ನಾಟಿ ವೈದ್ಯ ಭಟ್ಟರಹಳ್ಳಿ ಗಂಗಣ್ಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿ ಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.