ADVERTISEMENT

ಮತದಾರರ ನೋಂದಣಿಗೆ `ಬಿ-ಪ್ಯಾಕ್' ಆಂದೋಲನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 20:05 IST
Last Updated 4 ಏಪ್ರಿಲ್ 2013, 20:05 IST

ಬೆಂಗಳೂರು: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ-ಪ್ಯಾಕ್) ಕಳೆದ ಕೆಲವು ತಿಂಗಳಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಸಾರ್ವಜನಿಕರಿಗೆ ನೆರವು ನೀಡುತ್ತಿದೆ. ಹೆಸರು ನೋಂದಣಿ ಮಾಡಿಸಲು ಜನರಲ್ಲಿ ಪ್ರೋತ್ಸಾಹ ತುಂಬುತ್ತಿದೆ.
ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಜನಸ್ನೇಹಿಯಾದ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಆನ್‌ಲೈನ್ ಮೂಲಕ ಹೆಸರು ನೋಂದಣಿಗೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂಟು ವಾರಗಳಲ್ಲಿ 4.25 ಲಕ್ಷ ಆನ್‌ಲೈನ್ ನೋಂದಣಿ ಆಗಿದೆ. ಬಿ-ಪ್ಯಾಕ್ ಮತ್ತು ಸ್ಮಾರ್ಟ್‌ವೋಟ್ ಸಂಸ್ಥೆಗಳ ಪ್ರಯತ್ನದಿಂದ ಸುಮಾರು 95,000 ಜನ ಆನ್‌ಲೈನ್ ಅರ್ಜಿ ಸಲ್ಲಿಸಿದ್ದಾರೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ವಿಶ್ವವಿದ್ಯಾಲಯ ಕ್ಯಾಂಪಸ್ಸು, ಕಚೇರಿ ಆವರಣ, ವಸತಿ ಸಂಕೀರ್ಣ ಮೊದಲಾದ ಕಡೆಗಳಲ್ಲಿ ಆಂದೋಲನ ನಡೆಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಉತ್ತೇಜನ ನೀಡಲಾಗಿದೆ. ಬಯೋಕಾನ್, ಇನ್ಫೋಸಿಸ್, ಎಚ್‌ಪಿ, ಮೈಂಡ್ ಟ್ರೀ, ವಿಪ್ರೊ, ಮಿಸ್ಟ್ರಾಲ್, ಸಿಟ್ರಿಕ್ಸ್, ಐಬಿಎಂ, ಫಿಲಿಪ್ಸ್, ವಿಎಂ ವೈರ್, ಸಿಸ್ಕೊ, ಸ್ಯಾಪ್, ಎಲ್‌ಜಿ ಸಾಫ್ಟ್, ಸತ್ಯಂ, ಸಿಎಸ್‌ಸಿ, ಐಗೇಟ್, ಸೈಮನ್ಸ್, ಎಚ್‌ಸಿಎಲ್, ಬ್ರಿಟಾನಿಯಾ ಮತ್ತಿತರ ಕಾರ್ಪೋರೇಟ್ ಸಂಸ್ಥೆಗಳು, ಮೌಂಟ್ ಕಾರ್ಮೆಲ್, ಬೆಂಗಳೂರು ವಿಶ್ವವಿದ್ಯಾಲಯ, ಪಿಇಎಸ್‌ಕಾಲೇಜು, ಅಲಾಯನ್ಸ್ ಕಾಲೇಜು, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಜೈನ್ ಕಾಲೇಜು, ಬಿಐಟಿ, ಬಿಎಂಎಸ್, ವಿಜಯ ಕಾಲೇಜು, ಡಾನ್ ಬಾಸ್ಕೊ, ಎಚ್‌ಎಸ್‌ಆರ್ ಸರ್ಕಾರಿ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು.

ಏಪ್ರಿಲ್ 7ರವರೆಗೆ ನೋಂದಣಿಗೆ ಅವಕಾಶ ಇದ್ದು, ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗದವರು ಅರ್ಜಿ ಸಲ್ಲಿಸಬೇಕು.
ವಿವರಕ್ಕೆ 8880776655 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.