ADVERTISEMENT

ಮಹಿಳಾ ಸೀಟಿನಲ್ಲಿ ಪ್ರಯಾಣ: ರೂ.24 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಬೆಂಗಳೂರು: ನಗರ ಹಾಗೂ ಹೊರವಲಯದ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳಾ ಸೀಟಿನಲ್ಲಿ ಪ್ರಯಾಣ ಮಾಡಿದ 244 ಪುರುಷ ಪ್ರಯಾಣಿಕರನ್ನು ಪತ್ತೆ ಹಚ್ಚಿರುವ ತನಿಖಾ ಸಿಬ್ಬಂದಿ ಈ ಪ್ರಯಾಣಿಕರಿಗೆ ರೂ. 24,400 ದಂಡ ವಿಧಿಸಿದ್ದಾರೆ.
ಮಹಿಳಾ ಸೀಟು ಆಕ್ರಮಿಸುವ ಪುರುಷ ಪ್ರಯಾಣಿಕರ ಪತ್ತೆಗೆ ಇದೇ 12ರಿಂದ 14ರವರೆಗೆ ವಿಶೇಷ ತನಿಖಾ ಕಾರ್ಯಾಚರಣೆ ನಡೆಸಲಾಗಿತ್ತು.

ಇದೇ ವೇಳೆ, 1,271 ಟಿಕೆಟ್‌ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ರೂ.1,49,134 ದಂಡ ಪಡೆದು ನಿರ್ವಾಹಕರ ಮೇಲೆ 825 ಪ್ರಕರಣಗಳನ್ನು ತನಿಖಾ ಸಿಬ್ಬಂದಿ ದಾಖಲು ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.