ADVERTISEMENT

ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 20:10 IST
Last Updated 2 ಮೇ 2011, 20:10 IST

ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದ ಬಿಬಿಎಂಪಿ ವಾರ್ಡ್ 105ರ ವ್ಯಾಪ್ತಿಯ ಎಂಸಿ ಲೇಔಟ್‌ನಲ್ಲಿ ರೂ 45 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಪ್ರಿಯಕೃಷ್ಣ ಸೋಮವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕ್ಷೇತ್ರದ ಜನತೆಯ ನೀರಿಕ್ಷೆಯಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆಗಳನ್ನ ರೂಪಿಸಲಾಗಿದ್ದು ಎಲ್ಲ ಬಡಾವಣೆಗಳಿಗೆ  ಮೂಲ ಸೌಕರ್ಯ ಕಲ್ಪಿಸಲು ಅದ್ಯತೆ ನೀಡಲಾಗಿದೆ ಎಂದರು.

ಸಂಘ ಸಂಸ್ಥೆಯವರು, ನಾಗರಿಕರು ಕಾಮಗಾರಿ ನಡೆಯುವ ಸ್ಥಳದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಗುತ್ತಿಗೆದಾರ ಬಗ್ಗೆ ನಿಗಾ ವಹಿಸಿ ಕಳಪೆ ಕೆಲಸ ನಡೆಯದಂತೆ ನೋಡಿಕೊಳ್ಳವ ಹೊಣೆಗಾರಿಕೆಯು ನಿಮ್ಮ ಮೇಲೆಯೇ ಇದೆ ಎಂದು ತಿಳಿಸಿದರು. ಪಾಲಿಕೆ ಸದಸ್ಯೆ ರೂಪಾ ದೇವಿ, ಮುಖಂಡರಾದ ರಮೇಶ್, ಲಿಂಗೇ, ಮುರಳಿ, ಶಾಂತ ಕುಮಾರಿ, ನಾಗರಾಜು, ಮಂಜುನಾಥ್ ಇದ್ದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.