ಬೆಂಗಳೂರು: ನಗರದ ಸಿರ್ಸಿ ವೃತ್ತದಿಂದ ಕೆ.ಆರ್. ಮಾರುಕಟ್ಟೆವರೆಗಿನ ಮೇಲ್ಸೇತುವೆ ದುರಸ್ತಿ ಕಾರ್ಯ ಮಾ. ೮ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.
ಈ ಮೇಲ್ಸೇತುವೆ ಮೇಲೆ ಮೈಸೂರು ಕಡೆಯಿಂದ ಕೆ.ಆರ್. ಮಾರುಕಟ್ಟೆ, ಟೌನ್‌ಹಾಲ್ ಕಡೆಗೆ ಚಲಿಸುವ ವಾಹನಗಳು ಗೂಡ್‌ಶೆಡ್ ರಸ್ತೆಯ ರ್‌್ಯಾಂಪ್ ಮೂಲಕ ಕೆಳಗಿಳಿದು ಅಂಬೇಡ್ಕರ್ ವೃತ್ತ ಹಾಗೂ ಸಿ.ಸಿ.ಬಿ. ವೃತ್ತದ ಮುಖಾಂತರ ಮಾರುಕಟ್ಟೆ ಕಡೆಗೆ ಹೋಗಬೇಕು. ಕಾಮಗಾರಿ ನಡೆಯುವ ದಿನಗಳಲ್ಲಿ ಗೂಡ್‌ಶೆಡ್ ರ್‌್ಯಾಂಪ್ ಕ್ರಾಸ್‌ನಿಂದ ಮಾರುಕಟ್ಟೆ ವರೆಗಿನ ಮೇಲ್ಸೇತುವೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.