ADVERTISEMENT

ಮೈಮೇಲೆ ಬಿದ್ದರೆ ಹೇಗೆ...? ಡಿವಿಎಸ್ ಗರಂ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬೆಂಗಳೂರು: ಸದಾ ಹಸನ್ಮುಖಿಯಾಗಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಂಗಳವಾರ ವಿಧಾನ ಸಭೆಯಲ್ಲಿ ಕೆಲ ಕ್ಷಣ ಗರಂ ಆಗಿದ್ದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ, ಅಂಗವಿಕಲ ಮತ್ತು ಸಂಧ್ಯಾಸುರಕ್ಷಾ ಫಲಾನುಭವಿಗಳಿಗೆ ಪಿಂಚಣಿ ನೀಡುವಲ್ಲಿ ಆಗಿರುವ ವಿಳಂಬ ಕುರಿತು ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಪ್ರಸ್ತಾಪಿಸುತ್ತಿದ್ದಂತೆಯೇ, ಪ್ರತಿಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಸೇರಿದಂತೆ ಕಾಂಗ್ರೆಸ್, ಜೆಡಿಎಸ್‌ನ ಅನೇಕ ಸದಸ್ಯರು ಒಮ್ಮೆಲೇ ಎದ್ದು ನಿಂತು ನಾಡಗೌಡ ಮಾತಿಗೆ ಧ್ವನಿಗೂಡಿಸಿ, ತಮ್ಮ ಕ್ಷೇತ್ರದಲ್ಲೂ ಇದೇ ರೀತಿಯ ಸಮಸ್ಯೆ ಇದೆ ಎಂದು ಏರಿದ ಧ್ವನಿಯಲ್ಲಿ ಕೂಗಿದರು.

ಇದರಿಂದ ಸಿಟ್ಟಿಗೆದ್ದ ಸದಾನಂದಗೌಡ, `ಈ ರೀತಿ ಎಲ್ಲರೂ ಒಟ್ಟಿಗೆ ಎದ್ದುನಿಂತರೆ ನಾನು ಉತ್ತರ ನೀಡುವುದಿಲ್ಲ. ನಿಮಗೆ ಉತ್ತರಬೇಕು ಎಂದರೆ ತಾಳ್ಮೆಯಿಂದ ಕುಳಿತು ನಾನು ಹೇಳುವುದನ್ನು ಕೇಳಬೇಕು. ನಾನು ಉತ್ತರ ನೀಡಿದ ನಂತರವೂ ಸಮಾಧಾನ ಆಗದಿದ್ದರೆ ಆಗ ಪ್ರಶ್ನೆ ಕೇಳಲು ಅವಕಾಶವಿದೆ. ಆದರೆ ಎಲ್ಲರೂ ಒಟ್ಟಿಗೆ ಮೈಮೇಲೆ ಬಿದ್ದು ಕಬಡ್ಡಿ ಆಡಲು ಹೊರಟರೆ ಹೇಗೆ?~ ಎಂದು ಪ್ರತಿಪಕ್ಷಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.