ಬೆಂಗಳೂರು: ‘ಪೌರಾಣಿಕ ಕತೆಗಳ ಮೂಲಕ ಆಧುನಿಕ ಶಿಕ್ಷಣ ನೀಡುವ ಸಾಮರ್ಥ್ಯ ಯಕ್ಷಗಾನಕ್ಕಿದೆ’ ಎಂದು ಶಿಕ್ಷಣತಜ್ಞ ಕೆ.ಇ.ರಾಧಾಕೃಷ್ಣ ತಿಳಿಸಿದರು.
ಕರ್ನಾಟಕ ಕಲಾದರ್ಶಿನಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಶಿವರಾಮ ಕಾರಂತ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಾಂಸ್ಕೃತಿಕ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆಯು ಮನರಂಜನೆಯಷ್ಟೆ ಅಲ್ಲದೇ ನೈತಿಕ ಶಿಕ್ಷಣವನ್ನು ನೀಡುತ್ತದೆ. ದೇವಿ ಮಹಾತ್ಮೆಯ ಪ್ರಸಂಗಗಳು ಜನರಲ್ಲಿ ಭಕ್ತಿ ಭಾವವನ್ನು ಹುಟ್ಟಿಸುತ್ತದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
‘ಯಕ್ಷಗಾನ ರಂಗದಲ್ಲಿರುವ ಹಲವು ಸವಾಲುಗಳ ಬಗ್ಗೆಯೂ ಗಂಭೀರ ಚಿಂತನೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕು’ ಎಂದರು.
ಬಲಿಪ ನಾರಾಯಣ ಭಾಗವತರು, ಹಳ್ಳಾಡಿ ಜಯರಾಮಶೆಟ್ಟಿ ಅವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.