ADVERTISEMENT

ಯಶಸ್ವಿ ಕಿಡ್ನಿ ಕಸಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡಿದ್ದ 21 ವರ್ಷದ ಮೃತ ದಾನಿಯಿಂದ 61 ವರ್ಷದ ರೋಗಿಗೆ ನಗರದಲ್ಲಿರುವ ಸ್ಪರ್ಶ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ.

33 ವರ್ಷದ ನಾಗರತ್ನಮ್ಮ ಅವರ ಕಿಡ್ನಿಯನ್ನು 43 ವರ್ಷದ ಅವರ ಪತಿಗೆ ಕಸಿ ಮಾಡಲಾಗಿದೆ. ಈ ಎರಡೂ ಪ್ರಕರಣಗಳಲ್ಲೂ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಡಾ.ರಾಮಚಂದ್ರ ಮತ್ತು ಡಾ.ಅವಿನಾಶ್‌ ಅವರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ. ‘ಒಬ್ಬ ದಾನಿಯಿಂದ ಕಸಿಗಾಗಿ ಕಾಯುತ್ತಿರುವ ಎಂಟು ಮಂದಿಯ (ವಿವಿಧ ಅಂಗಾಗಗಳ ಮೂಲಕ) ಜೀವವನ್ನು ಉಳಿಸಬಹುದು’ ಎಂದು ವೈದ್ಯರ ತಂಡ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.