ಬೆಂಗಳೂರು, (ಪಿಟಿಐ): ರಾಮನಗರ ಜಿಲ್ಲೆಯ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ಈಜಲು ಹೋದ ನಾಲ್ವರು ಹದಿಹರೆಯದವರು ಮುಳುಗಿ ಮೃತರಾದ ದಾರುಣ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕರನ್ನು ಪುನೀತ್ (17), ಜಗನ್ (16) ಮನೋಜ್ ಮತ್ತು ಯುವತಿಯನ್ನು ಯಶಸ್ವಿನಿ (17) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿನ ನಿವಾಸಿಗಳು ಎನ್ನಲಾಗಿದೆ.
ನಲ್ಲಗುಡ್ಡೆ ಕೆರೆಯಿಂದ ಮನೋಜ್ ಮತ್ತು ಯಶಸ್ವಿನಿ ಅವರ ಮೃತದೇಹಗಳನ್ನು ಕರೆಯಿಂದ ಹೊರತೆಗೆಯಲಾಗಿದೆ. ಉಳಿದ ಇಬ್ಬರ ಶವಗಳಿಗಾಗಿ ಮುಳುಗುಗಾರರು ಶೋಧಕಾರ್ಯ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.