ADVERTISEMENT

ರೂಫ್‌ಟಾಪ್‌ ಪಬ್‌, ಬಾರ್‌ ಪಟ್ಟಿ ಶೀಘ್ರ ಬಿಡುಗಡೆ

ಸುರಕ್ಷತಾ ನಿಯಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ಬೆಂಗಳೂರು: ಸುರಕ್ಷತಾ ನಿಯಮಗಳನ್ನು ಪಾಲಿಸದ ರೂಫ್‌ಟಾಪ್‌ ಪಬ್‌ಗಳು ಮತ್ತು ಬಾರ್‌ಗಳ ಪಟ್ಟಿಯನ್ನು ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ಕೆಎಸ್‌ಎಫ್‌ಇಎಸ್‌) ಇಲಾಖೆ ಸೇರಿ ಸಿದ್ಧಪಡಿಸಿವೆ.

‘ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಪಬ್‌ ಹಾಗೂ ಬಾರ್‌ಗಳ ಪಟ್ಟಿಯನ್ನು ಮುಂದಿನವಾರ ಬಿಡುಗಡೆ ಮಾಡಲಿದ್ದೇವೆ’ ಎಂದು ಕೆಎಸ್‌ಎಫ್‌ಇಎಸ್‌ ಡಿಜಿಪಿ ಎಂ.ಎನ್‌.ರೆಡ್ಡಿ ತಿಳಿಸಿದರು.

‘ಅವುಗಳಿಗೆ ನೀಡಿದ್ದ ಸ್ವಾಧೀನಾನುಭವ ಪ್ರಮಾಣಪತ್ರವನ್ನು ಬಿಬಿಎಂಪಿ ರದ್ದುಪಡಿಸಲಿದೆ. ಅವುಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂಗೆ ಹಾಗೂ ನೀರು ಪೂರೈಕೆ ಸ್ಥಗಿತಗೊಳಿಸವಂತೆ ಜಲಮಂಡಳಿಗೆ ಪತ್ರ ಬರೆಯುತ್ತೇವೆ’ ಎಂದರು.

ADVERTISEMENT

‘ನಗರದಲ್ಲಿ ರೂಫ್‌ಟಾಪ್‌ಗಳಲ್ಲಿ ವಹಿವಾಟು ನಡೆಸುತ್ತಿರುವ ಎಲ್ಲ ಪಬ್ ಹಾಗೂ ಬಾರ್‌ಗಳೂ ಅನಧಿಕೃತ. ಈ ಪೈಕಿ ಕೆಲವನ್ನು ಗುರುತಿಸಿದ್ದು, ಶೀಘ್ರವೇ ಮುಚ್ಚಿಸಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಎಂ.ಎನ್‌.ಲೋಕೇಶ್‌ ತಿಳಿಸಿದರು.

‘ಬಿಬಿಎಂಪಿಯ ಪೂರ್ವ ವಲಯದ ಇಂದಿರಾನಗರ, ಎಚ್‌ಎಎಲ್‌ ಮೂರನೇ ಹಂತದಲ್ಲಿರುವ ಬಹುತೇಕ ಪಬ್‌ ಮತ್ತು ಬಾರ್‌ಗಳು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದವು. ಬೇರೆ ಕಡೆ ಸ್ಥಳ ಸಿಗುವವರೆಗೆ ಹಾಗೂ ಉದ್ಯೋಗಿಗಳು ಪರ್ಯಾಯ ಕೆಲಸ ಹುಡುಕಿಕೊಳ್ಳುವವರೆಗೆ ವಹಿವಾಟು ಮುಂದುವರಿಸಲು ಮಾಲೀಕರು ಅವಕಾಶ ಕೋರಿದ್ದರು. ಇದಕ್ಕೆ ಒಪ್ಪಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್‌ ಪಾಷಾ ತಿಳಿಸಿದರು.
***
ಅಂಕಿ ಅಂಶ

100
ರೂಫ್‌ಟಾಪ್‌ ಪಬ್‌ಗಳನ್ನು ಬಿಬಿಎಂಪಿ ಇದುವರೆಗೆ ಮುಚ್ಚಿಸಿದೆ

133 ‍
ಪಬ್‌ ಮತ್ತು ಬಾರ್‌ಗಳಿಗೆ ನೋಟಿಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.