ADVERTISEMENT

ರೆಡ್‌ಬಸ್‌ನಿಂದ ಕಾರ್‌ ಪೂಲಿಂಗ್‌ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:45 IST
Last Updated 12 ಜೂನ್ 2019, 19:45 IST
   

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರದಟ್ಟಣೆ ನಿಯಂತ್ರಿಸಲು ರೆಡ್‌ಬಸ್‌ ಆನ್‌ಲೈನ್‌ ಬಸ್‌ ಟಿಕೆಟ್‌ ಬುಕಿಂಗ್‌ ಸಂಸ್ಥೆಯು ಕಾರ್‌ ಪೂಲಿಂಗ್‌ಗೆ ಅನುವು ಮಾಡಿಕೊಡಲು ಆ್ಯಪ್‌ ಅಭಿವೃದ್ಧಿಪಡಿಸಿದೆ. ‘ಆರ್‌ಪೂಲ್‌’ ಸೇವೆಯನ್ನು ಬುಧವಾರ ಆರಂಭಿಸಿದೆ.

‘ಮನೆ ಹಾಗೂ ಕಚೇರಿ ನಡುವೆ ಈ ಸಾರಿಗೆ ವ್ಯವಸ್ಥೆ ಲಭ್ಯವಿದೆ. ತಮ್ಮ ಕಾರಿನ ಬದಲಿಗೆ ಅದೇ ಮಾರ್ಗದಲ್ಲಿ ಸಂಚರಿಸುವ ಕಾರಿನಲ್ಲಿ ಉದ್ಯೋಗಿಗಳು ಪ್ರಯಾಣಿಸಬಹುದು. ಇದರಿಂದ ಇಂಧನ, ಹಣ ಉಳಿಕೆಯಾಗಿ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಈಗಿರುವ ರೆಡ್‌ಬಸ್‌ ಆ್ಯಪ್‌ನಲ್ಲೇ ‘ಆರ್‌ಪೂಲ್‌’ ಲಭ್ಯವಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಾಶ್‌ ಸಂಗಮ್‌ ತಿಳಿಸಿದರು.

ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ವಾಹನಗಳು ಇರುವ ನಗರವಾಗಿದೆ. ಇದರ ಪರಿಣಾಮವಾಗಿ ಸಂಚಾರದಟ್ಟಣೆ ಹೆಚ್ಚಾಗಿ, ಮಾಲಿನ್ಯ ನಗರವಾಗುತ್ತಿದೆ’ ಎಂದರು.‘ಈ ಆ್ಯಪ್‌ ಮುಖಾಂತರ ಒಂದೇ ಮಾರ್ಗದ ಪ್ರಯಾಣಿಕರು ತಮ್ಮ ಕಾರಿನ ಬದಲಿಗೆ ಆರ್‌ಪೂಲ್‌ನಲ್ಲಿ ನೋಂದಣಿಯಾದ ಕಾರಿನಲ್ಲಿ ಪ್ರಯಾಣಿಸಬಹುದು. ಆ್ಯಪ್‌ನಲ್ಲಿ ಪ್ರಯಾಣಿಸಲು ಇಚ್ಛಿಸುವ ಹಾಗೂ ಪ್ರಯಾಣಕ್ಕೆ ಆಹ್ವಾನಿಸುವವರ ಭಾವಚಿತ್ರ ಇರಲಿದೆ. ಅವರು ಕೆಲಸ ಮಾಡುವ ಸಂಸ್ಥೆಗಳು ನೀಡಿರುವ ಇಮೇಲ್‌ ಜೊತೆಗೆ ಆ್ಯಪ್‌ ಸಂಪರ್ಕಿಸುತ್ತದೆ’ ಎಂದರು.

ADVERTISEMENT

‘ಸದ್ಯ ಬೆಂಗಳೂರು, ಹೈದರಾಬಾದ್‌ ಹಾಗೂ ಪುಣೆಯಲ್ಲಿ ಆರ್‌ಪೂಲ್‌ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇತರ ನಗರಗಳಲ್ಲೂ ಈ ಸೇವೆ ನೀಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.