ADVERTISEMENT

ಲಂಚ: ಆರೋಪಿಗಳು ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:07 IST
Last Updated 5 ಮಾರ್ಚ್ 2014, 19:07 IST

ಬೆಂಗಳೂರು: ಖಾತೆ ಬದಲಾವಣೆಗೆ ರೂ. 15 ಸಾವಿರ ಲಂಚ ಕೇಳಿದ ಕೆಂಗೇರಿ ಹೋಬ­ಳಿಯ ಕಂದಾಯ ನಿರೀಕ್ಷಕಿ ಸವಿತಾ ಮತ್ತು ಅವರ ಕಚೇರಿಯಲ್ಲಿ ಸಹಾ­ಯಕ ಆಗಿ ಕೆಲಸ ಮಾಡುತ್ತಿರುವ ಎಸ್‌. ರಮೇಶ್‌ ಅವರು ಲೋಕಾ­ಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಕೆಂಗೇರಿಯ ಕೆ.ಎ. ರಾಮಚಂದ್ರ  ಪಾಲಿಗೆ ಪಿತ್ರಾರ್ಜಿತವಾಗಿ ಬಂದಿ­­­ರುವ 10 ಗುಂಟೆ ಜಮೀನಿನ ಖಾತೆ ಬದ­ಲಾವಣೆಗೆ ಸವಿತಾ ರೂ. 20­ ಸಾವಿರ ಲಂಚ ಕೇಳಿದ್ದರು. ನಂತರ, ರೂ. 15­ ಸಾವಿರ ಲಂಚ ಕೊಟ್ಟರೆ ಕೆಲಸ ಮಾಡಿ­ಕೊಡುವುದಾಗಿ ಒಪ್ಪಿ­ಕೊಂಡಿ­ದ್ದ­ರು­.

ಲಂಚ ಕೊಡಲು ಮನಸ್ಸು ಬಾರದೆ ರಾಮ­ಚಂದ್ರ ಅವರು ಲೋಕಾಯುಕ್ತ ಪೊಲೀ­ಸರಿಗೆ ದೂರು ಸಲ್ಲಿಸಿದರು. ಸವಿತಾ ಅವರ ಬಂಧನಕ್ಕೆ ಲೋಕಾ­ಯುಕ್ತ ಪೊಲೀಸರು ಬಲೆ ಬೀಸಿದರು. ರಮೇಶ್‌ ಅವರು ಸವಿತಾ ಅವರ ಪರ­ವಾಗಿ ಬುಧವಾರ ಲಂಚ ಪಡೆ­ಯುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದರು. ನಂತರ ಸವಿತಾ ಅವರನ್ನೂ ಪೊಲೀಸರು ಬಂಧಿಸಿದರು.

ಇವರಿಬ್ಬರನ್ನೂ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು­ಪಡಿ­ಸಲಾಯಿತು. ನ್ಯಾಯಾ­ಲಯ ಇವರನ್ನು ನ್ಯಾಯಾಂಗ ಬಂಧ­ನಕ್ಕೆ ಒಪ್ಪಿಸಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.