ಬೆಂಗಳೂರು: ವಿದ್ಯುತ್ ಕೈಕೊಟ್ಟಿದ್ದರಿಂದ ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಲಿಫ್ಟ್‌ನಲ್ಲಿ ಮೂವರು ಸಿಬ್ಬಂದಿ ಸಿಕ್ಕಿಹಾಕಿಕೊಂಡ ಘಟನೆ ಸೋಮವಾರ ಸಂಜೆ 4.30ರ ಸುಮಾರಿಗೆ ನಡೆದಿದೆ.
ಮೂರು ಮತ್ತು ನಾಲ್ಕನೇ ಮಹಡಿಯ ಮಧ್ಯದಲ್ಲಿ ಲಿಫ್ಟ್ ಸಿಕ್ಕಿಹಾಕಿಕೊಂಡಿತ್ತು. ಸುರೇಶ (56), ವಿಶ್ವೇಶ್ವರಪ್ಪ (60) ಮತ್ತು ಚನ್ನೇಗೌಡ (50) ಲಿಫ್ಟ್‌ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಿಫ್ಟ್ ಮಧ್ಯದಲ್ಲಿ ನಿಂತಾಗ ವಿಶ್ವೇಶ್ವರಪ್ಪ ಎಂಬವರು ಮಾಹಿತಿ ನೀಡಿದ್ದಾರೆ. ಬಳಿಕ ಸಚಿವಾಲಯದ ಅಗ್ನಿಶಾಮಕ ಸಿಬ್ಬಂದಿ ಲಿಫ್ಟ್ ಬಾಗಿಲು ತೆರದು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.