ADVERTISEMENT

ವಸ್ತ್ರಸಂಹಿತೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:47 IST
Last Updated 12 ಸೆಪ್ಟೆಂಬರ್ 2013, 19:47 IST

ಬೆಂಗಳೂರು: ವಸ್ತ್ರಸಂಹಿತೆ ಜಾರಿಗೆ ತಂದಿರುವುದನ್ನು ವಿರೋಧಿಸಿ ‘ವೋಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ’ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ­ಗಳು ಗುರುವಾರ ಪ್ರತಿಭಟನೆ ಮಾಡಿದರು.

ತಯಾರಿಕಾ ಕಂಪೆನಿಯ ಹೆಸರು ಮತ್ತು ಲೋಗೊ (ಚಿಹ್ನೆ) ಇರುವ ಕಾಲುಚೀಲ (ಸಾಕ್ಸ)್ ಧರಿಸಿ ಬಂದಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿ   ಮಧ್ಯಾಹ್ನ­ದವರೆಗೆ ಕಾಲೇಜಿನ ಪ್ರವೇಶ ದ್ವಾರ ದಲ್ಲೇ ತಡೆದು ನಿಲ್ಲಿಸಲಾಯಿತು.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.
’ಕಾಲುಚೀಲದ ಮೇಲೆ ತಯಾರಿಕಾ ಕಂಪೆನಿಯ ಹೆಸರು ಅಥವಾ ಲೋಗೊ ಇರಬಾರದೆಂದು ಆಡಳಿತ ಮಂಡಳಿ ಒತ್ತಡ ಹಾಕುತ್ತಿದೆ.

ಇದರಿಂದ ಗುಣಮಟ್ಟದ ಕಾಲುಚೀಲ ಖರೀದಿ ಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ದೂರಿದರು. ನಂತರ ಮಧ್ಯಾಹ್ನ ಎರಡು ಸುಮಾರಿಗೆ ವಿದ್ಯಾರ್ಥಿಗಳು, ಪ್ರಾಂಶು­ಪಾಲರು ಮತ್ತು ಆಡಳಿತ ಮಂಡಳಿ ಸದಸ್ಯರನ್ನು ಭೇಟಿಯಾಗಿ ವಸ್ತ್ರಸಂಹಿತೆ ಮಾರ್ಗ­ಸೂಚಿ ಹಿಂಪಡೆ­ಯು­ವಂತೆ ಮನವಿ ಸಲ್ಲಿಸಿದರು. ಬಳಿಕ ಅವರಿಗೆ ತರಗತಿ ಗಳಿಗೆ ಹೋಗಲು ಅವಕಾಶ ನೀಡಲಾಯಿತು.

ಸೋಮವಾರದಿಂದ ಗುರು­ವಾರ ದವರೆಗೆ ಸಮವಸ್ತ್ರ ಧರಿಸಬೇಕು. ಬಿಳಿ ಅಂಗಿ ಮತ್ತು ಕಾಲುಚೀಲ, ಕಂದು ಬಣ್ಣದ ಪ್ಯಾಂಟ್‌, ಕಪ್ಪು ಬಣ್ಣದ ಶೂ ಹಾಗೂ ಕೆಂಪು ಬಣ್ಣದ ಕತ್ತುಪಟ್ಟಿ (ಟೈ) ಧರಿಸಬೇಕು ಎಂದು ಆಡಳಿತ ಮಂಡಳಿ ಸೂಚಿಸಿದೆ’ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದ.
‘ಯಾವುದೇ ಆಕ್ಷೇಪವಿಲ್ಲದೆ ಎರಡು ವರ್ಷಗಳಿಂದ ಇದೇ ಮಾದರಿಯ ಕಾಲುಚೀಲ ಧರಿಸುತ್ತಿದ್ದೇನೆ. ಆದರೆ, ಈಗ ಆಡಳಿತ ಮಂಡಳಿಯು ಸಾದಾ ಕಾಲುಚೀಲ ಧರಿಸುವಂತೆ ಒತ್ತಡ ಹೇರುತ್ತಿದೆ’ ಎಂದು ಆತ ಹೇಳಿದ.

ಮೈಸೂರು ರಸ್ತೆಯ ಆರ್‌.ವಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ಸಹ ವಸ್ತ್ರಸಂಹಿತೆ ಮಾರ್ಗಸೂಚಿ ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.