ADVERTISEMENT

ವಹಿವಾಟು ವಿಸ್ತರಿಸಲಿ: ಸಚಿವರ ಆಶಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:35 IST
Last Updated 7 ಜನವರಿ 2012, 19:35 IST

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಮಾತ್ರವಲ್ಲದೇ ರಾಷ್ಟ್ರದ ರಾಜಧಾನಿಯಲ್ಲೂ `ಹರ್ಷ~ ಮಳಿಗೆಯ ವ್ಯಾಪಾರ ವಹಿವಾಟು ವಿಸ್ತಾರವಾಗಲಿ ಎಂದು ಸಂಸದ ಆಸ್ಕರ್ ಫರ್ನಾಂಡಿಸ್ ಆಶಿಸಿದರು.

ಪ್ರಕಾಶ್ ರೀಟೈಲ್ ಪ್ರೈವೇಟ್ ಲಿಮಿಟೆಡ್ ನೂತನವಾಗಿ ನಾಯಂಡನಹಳ್ಳಿಯಲ್ಲಿ ಸ್ಥಾಪಿಸಿರುವ ಹರ್ಷ ಮಳಿಗೆಉದ್ಘಾಟಿಸಿ ಅವರು ಮಾತನಾಡಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಗೃಹೋಪಯೋಗಿ ಉತ್ಪನ್ನಗಳನ್ನು ನೀಡುವಲ್ಲಿ ಹರ್ಷ ಯಶಸ್ವಿಯಾಗಿದೆ ಎಂದರು. ಸಚಿವ ವಿ.ಎಸ್. ಆಚಾರ್ಯ ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಆಂಜನೇಯ ಪ್ರಸಾದ್, ಪಾಲಿಕೆ ಸದಸ್ಯೆ ಎಚ್.ಎನ್ .ರಾಜೇಶ್ವರಿ ಉಮೇಶ್ ಬೆಳಗೋಡ್, ಪ್ರಕಾಶ್ ರೀಟೈಲ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಸೂರ್ಯ ಪ್ರಕಾಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.