ADVERTISEMENT

ವಾಗ್ದಂಡನೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:32 IST
Last Updated 10 ಜೂನ್ 2013, 19:32 IST

ಬೆಂಗಳೂರು: ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಿದ್ದ ಅಂಶ ಪ್ರಕಟಿಸಿದ್ದ `ಪ್ರಜಾವಾಣಿ', `ಡೆಕ್ಕನ್ ಹೆರಾಲ್ಡ್', `ಉದಯವಾಣಿ' ಪತ್ರಿಕೆಗಳಿಗೆ 3 ವರ್ಷ ಜಾಹೀರಾತು ನೀಡದೇ ವಾಗ್ದಂಡನೆ ವಿಧಿಸಬೇಕು ಎಂಬ ವಿಧಾನಸಭೆ ಹಕ್ಕುಬಾಧ್ಯತಾ ಸಮಿತಿ ಶಿಫಾರಸನ್ನು ಅನುಮೋದಿಸಬಾರದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ. ಪತ್ರಿಕೆಗಳಿಗೆ ಜಾಹೀರಾತು ನಿಲ್ಲಿಸುವುದು, ಸುದ್ದಿ ಸಿಗದಂತೆ ಮಾಡುವುದು, ವರದಿಗಾರರಿಗೆ ಬೆದರಿಕೆ ಹಾಕುವುದು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದಂತೆ. ಹೀಗಾಗಿ ಸಮಿತಿ ಶಿಫಾರಸನ್ನು ಒಪ್ಪಿಕೊಳ್ಳಬಾರದು ಎಂದು ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ರಾಜು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.