ADVERTISEMENT

ವಾಟ್ಸ್‌ಆ್ಯಪ್‌ ದೂರು ನೋಂದಣಿ ಫಲಕ ತೆರವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:31 IST
Last Updated 27 ಮಾರ್ಚ್ 2018, 19:31 IST
ವಾಟ್ಸ್‌ಆ್ಯಪ್‌ ದೂರು ನೋಂದಣಿ ಫಲಕ ತೆರವು
ವಾಟ್ಸ್‌ಆ್ಯಪ್‌ ದೂರು ನೋಂದಣಿ ಫಲಕ ತೆರವು   

ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಬಂದ ದೂರಿನನ್ವಯ ಸಂಚಾರ ಪೊಲೀಸರು, ವಾಹನವೊಂದರ ದೋಷಪೂರಿತ ನೋಂದಣಿ ಫಲಕವನ್ನು ಮಂಗಳವಾರ ತೆರವು ಮಾಡಿದ್ದಾರೆ.

ಎನ್‌.ಆರ್‌.ಶ್ರೀನಿವಾಸಮೂರ್ತಿ ಎಂಬುವರ ಹೆಸರಿನಲ್ಲಿ ನೋಂದಣಿ ಆಗಿರುವ ಫಾರ್ಚ್ಯೂನರ್ ಕಾರು (ಕೆಎ 04 ಎಂಆರ್‌ 8424) ನಗರದಲ್ಲಿ ಸಂಚರಿಸುತ್ತಿತ್ತು. ಅದರ ನೋಂದಣಿ ಫಲಕದಲ್ಲಿ ‘ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸದಸ್ಯ’ ಎಂದು ಬರೆಯಲಾಗಿತ್ತು.

ಅದನ್ನು ಗಮನಿಸಿದ್ದ ಸಾರ್ವಜನಿಕರೊಬ್ಬರು, ಫಲಕ ಸಮೇತ ಕಾರಿನ ಚಿತ್ರವನ್ನು ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಸಂಚಾರ ಪೊಲೀಸರಿಗೆ ಕಳುಹಿಸಿದ್ದರು. ಪರಿಶೀಲನೆ ನಡೆಸಿದ್ದ ಪೊಲೀಸರು, ಆನಂದನಗರದ ಏಟ್ರಿಯಾ ತಾಂತ್ರಿಕ ಮಹಾವಿದ್ಯಾಲಯದ ಬಳಿ ಕಾರು ನಿಂತಿದ್ದನ್ನು ಪತ್ತೆ ಹಚ್ಚಿದ್ದರು. ಬಳಿಕ ಸ್ಥಳಕ್ಕೆ ಹೋಗಿ, ನೋಂದಣಿ ಫಲಕವನ್ನು ತೆರವುಗೊಳಿಸಿದರು.

ADVERTISEMENT

‘ತೆರವು ವೇಳೆ ಕಾರಿನ ಚಾಲಕ ಮಾತ್ರ ಸ್ಥಳದಲ್ಲಿದ್ದ. ಆತನಿಗೆ ನೋಟಿಸ್‌ ನೀಡಿ ಎಚ್ಚರಿಕೆ ನೀಡಿದ್ದೇವೆ. ಕಾರನ್ನು ಬಳಕೆ ಮಾಡುತ್ತಿದ್ದ ವ್ಯಕ್ತಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸದಸ್ಯ ಹೌದು? ಅಲ್ಲವೋ? ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.