ADVERTISEMENT

ವಿಜೃಂಭಣೆಯ ಬಸವಣ್ಣ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST

ಬೆಂಗಳೂರು: ದಾಸನಪುರ ಹೋಬಳಿಯ ತೋಟಗೆರೆ ಗ್ರಾಮದ ಪ್ರಸಿದ್ಧ ಬಸವಣ್ಣ ದೇವರ ಜಾತ್ರೆ ವಿಜೃಂಭಣೆಯಿಂದ ಜರುಗಿತ್ತು. ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಏಳು ಗ್ರಾಮಗಳಿಂದ ಭಕ್ತುರು ಬಂದಿದ್ದರು.‌

ಮುತ್ತೈದೆಯರು ಬೆಲ್ಲದ ಆರತಿ ಬೆಳಗಿದರೆ, ಹರಕೆ ಹೊತ್ತ ಭಕ್ತರು ಕೊಂಡ ಹಾಯ್ದರು. ಮಧ್ಯಾಹ್ನದ ವೇಳೆಗೆ ಜಾತ್ರೆಗ ಬಂದ ತೋಟಗೆರೆ ಗ್ರಾಮಸ್ಥರು ದನಗಳನ್ನು ಸಿಂಗರಿಸಿಕೊಂಡು ಬಂದು ದೇವಸ್ಥಾನದ ಸುತ್ತಲು ಪ್ರದಕ್ಷಣೆ ಮಾಡಿಸಿದರು.

‘ಬೆಳಿಗ್ಗೆಯೆ ಹೋರಿಗಳ ಮೈ ತೊಳೆದು ಅವುಗಳನ್ನು ಸಿಂಗರಿಸುತ್ತೇವೆ. ಪಾನಕ, ಕೊಸಂಬರಿ ಮತ್ತು ಮಜ್ಜಿಗೆ ಸಿದ್ಧಪಡಿಸಿಕೊಂಡು ತಂದು ಇಲ್ಲಿ ವಿತರಿಸುತ್ತೇವೆ. ಮುತೈದೆಯರು ಉಪವಾಸ ಇದ್ದು ಆರತಿಯನ್ನು ಹೊತ್ತುಕೊಂಡು ಬರಿಗಾಲಿನಲ್ಲಿ ದೇವಸ್ಥಾನಕ್ಕೆ ಬರುತ್ತಾರೆ’ ಎಂದು ತೋಟಗೆರೆ ಗ್ರಾಮದ ನಿವಾಸಿ ಬಸವೇಗೌಡ ಹೇಳಿದರು.

ADVERTISEMENT

‘ಮೂವತ್ತು ವರ್ಷಗಳಿಂದ ಈ ಜಾತ್ರೆ ನಡೆಯುತ್ತಿದೆ. ಹೆಸರಘಟ್ಟ, ಶ್ಯಾನುಭೋಗನ ಹಳ್ಳಿ, ಗೋಪಾಲಪುರ, ತೋಟಗೆರೆ, ದಾಸನೇಹಳ್ಳಿಗಳ ಜನರು ಇದನ್ನು ಸಂಭ್ರಮದಿಂದ ಆಚರಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.