ADVERTISEMENT

ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:46 IST
Last Updated 7 ಸೆಪ್ಟೆಂಬರ್ 2013, 19:46 IST

ಪೀಣ್ಯ ದಾಸರಹಳ್ಳಿ: `ಕನ್ನಡ ನಾಡು ಕಲೆಗಳ ಶ್ರೀಮಂತ ಬೀಡು ಎಂಬಂತೆ ನಾಡಿನ ಸೊಬಗನ್ನು ಆಸ್ವಾದಿಸಿದರೆ ಕನ್ನಡ ಭಾಷೆ ನಾಡು-ನುಡಿ ಬೆಳವಣಿಗೆ ಹೊಂದುತ್ತದೆ' ಎಂದು ಲೇಖಕ ಎಲ್.ಜಿ. ಜ್ಯೋತೀಶ್ವರ ಅಭಿಪ್ರಾಯಪಟ್ಟರು.

ದಾಸರಹಳ್ಳಿಯ ಸಿಡೇದಹಳ್ಳಿಯಲ್ಲಿರುವ ಸೌಂದರ್ಯ ಮ್ಯಾನೇಜ್‌ಮೆಂಟ್ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿ.ಮುರಳಿಕೃಷ್ಣ ದಾಸ ಸಾಹಿತ್ಯದ ಸಂಗೀತ ಹಾಡುವ ಮೂಲಕ ಸಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಗೋಪಿ ತಬಲ, ಬಿ.ಪರಮೇಶ್ ಕೀಬೋರ್ಡ್ ನುಡಿಸಿದರು.

ಪ್ರಾಂಶುಪಾಲ ಪ್ರೊ.ಅನಿಲ್ ಕುಮಾರ್, ಸಂಸ್ಥೆಯ ನಿರ್ದೇಶಕ ಜಯರಾಮ ಶೆಟ್ಟಿ, ಉಪನ್ಯಾಸಕ ಪ್ರೊ.ಭೋಗರಾಜ್, ಇಲಾಖೆಯ ದೇವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.