
ಪ್ರಜಾವಾಣಿ ವಾರ್ತೆಬೆಂಗಳೂರು ‘ಕೊಚ್ಚಾಡಿಯನ್’ ಸಿನಿಮಾದ ಆಡಿಯೋ ಸಿ.ಡಿ ಬಿಡುಗಡೆ ಅಂಗವಾಗಿ ‘ಕರ್ನಾಟಕ ರಾಜ್ಯ ರಜಿನಿ ಜಿ ಸೇವಾ ಸಮಿತಿ’ ವತಿಯಿಂದ ಗವಿಪುರ ಗುಟ್ಟಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು.
ರಜನಿಕಾಂತ್ ಅವರ ನಾಟಕದ ಗುರು ಪಿ.ಎಸ್.ಚಂದ್ರಶೇಖರ್ ಅವರು ಮಾತನಾಡಿ, ‘ರಜನಿಕಾಂತ್ ಅವರ ನಟನೆಗೆ ಮರುಳಾದವರೇ ಇಲ್ಲ. ಹಲವು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರ ಕೊಚ್ಚಾಡಿಯನ್ ಸಿನಿಮಾವೂ ಶತದಿನಗಳನ್ನು ಪೂರೈಸಲಿ’ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.