ADVERTISEMENT

‘ವಿದ್ಯಾರ್ಥಿ ಬ್ಲೂವೇಲ್‌ ಆಡುತ್ತಿರಲಿಲ್ಲ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST

ಬೆಂಗಳೂರು: ‘ವಿಂಡ್ಸರ್‌ ಮ್ಯಾನರ್‌ ಸೇತುವೆಯಿಂದ ಬೀಳಲು ಮುಂದಾಗಿದ್ದ ವೇಳೆ ರಕ್ಷಿಸಲಾದ ಎಂಬಿಎ ವಿದ್ಯಾರ್ಥಿ ಅಜಯ್‌ (28) ಬ್ಲೂವೇಲ್‌ ಆಟ ಆಡುತ್ತಿರಲಿಲ್ಲ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದ್ಯಾರ್ಥಿ ಮೈ ಮೇಲೆ ಯಾವುದೇ ಗಾಯಗಳಿಲ್ಲ. ಮಾನಸಿಕ ಅಸ್ವಸ್ಥನಾಗಿರುವ ಆತನಿಗೆ ಚಿಕಿತ್ಸೆಯ ಅಗತ್ಯ ಇದೆ. ಈಗಾಗಲೇ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ’ ಎಂದರು.

ಸ್ಥಳೀಯ ಕಾಲೇಜು ವಿದ್ಯಾರ್ಥಿ: ‘ಅಜಯ್‌ನ ತಂದೆಯು ಬಿಹಾರದಲ್ಲಿ ಆಲಂಕಾರಿಕ ವಸ್ತುಗಳ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಮೈಸೂರಿನ ಎಂ.ಬಿ.ಎ ಕಾಲೇಜೊಂದರಲ್ಲಿ ಓದುತ್ತಿರುವುದಾಗಿ ಅಜಯ್‌ ಹೇಳುತ್ತಿದ್ದಾನೆ. ಆದರೆ, ಆತ ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದ ಎಂದು ಪೋಷಕರು ತಿಳಿಸಿ
ದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಇರುವುದರಿಂದ ಹೈಗ್ರೌಂಡ್ಸ್‌ ಠಾಣೆಯ ಇಬ್ಬರು ಸಿಬ್ಬಂದಿ, ಆತನನ್ನು ಕಾಯುತ್ತಿದ್ದಾರೆ. ಯುವತಿಯ ಧ್ವನಿಯಲ್ಲೇ ಆತ, ವೈದ್ಯರು ಹಾಗೂ ಪೊಲೀಸರೊಂದಿಗೆ ಮಾತನಾಡು
ತ್ತಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.