ADVERTISEMENT

ವಿಷಪೂರಿತ ಕಾಯಿ ಸೇವನೆ: 12 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 20:20 IST
Last Updated 19 ಸೆಪ್ಟೆಂಬರ್ 2013, 20:20 IST

ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ವೀರಾಪುರದ ಕೆಂಪಯ್ಯ ಎಂಬುವರಿಗೆ ಸೇರಿದ 12 ಕುರಿಗಳು ಗುರುವಾರ ಮಧ್ಯಾಹ್ನ ವಿಷಪೂರಿತ ಕಾಯಿ ತಿಂದು ಮೃತಪಟ್ಟಿವೆ.

ಸ್ಥಳಕ್ಕೆ ಭೇಟಿ ನೀಡಿದ್ದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಶೇಖರ್ ಕೆಂಪಯ್ಯ ಈ ಕುರಿತು ವಿವರಿಸಿ, ‘ಕುರಿಗಳು ಟಪಾಲ್ ಕಾಯಿ ತಿಂದದ್ದರಿಂದ ಅವುಗಳ ದೇಹ­ದಲ್ಲಿ ಆರ್ಸೆನಿಕ್ ಪಾಯ್ಸನ್ ಹೈಡ್ರೋಸಾನಿಕ್ ವಿಷ ಬಿಡುಗ­ಡೆಯಾಗಿ ಮೃತಪಟ್ಟಿವೆ’ ಎಂದರು.
ಗುಡೇಮಾರನಹಳ್ಳಿಯ ಪಶುವೈದ್ಯ ಶಾಲೆಯ ಡಾ.ಜ್ಯೋತಿ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಶವಪರೀಕ್ಷೆ ನಡೆಸಿದರು.

ಸೋಲೂರು ಉಪ ತಹಶೀಲ್ದಾರ್ ಎನ್.ಶಿವಕುಮಾರ್ ಭೇಟಿ ನೀಡಿದ್ದರು.

ಮನವಿ: ಸಾಕಿದ ಕುರಿಗಳನ್ನು ಕಳೆದು­ಕೊಂಡಿರುವ ಕೆಂಪಯ್ಯ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ­ಯಿಂದ ಪರಿಹಾರ ಒದಗಿಸಬೇಕೆಂದು ವೀರಾಪುರ ಗೊಲ್ಲರಹಟ್ಟಿಯ ನಾಗರಾಜ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.