ADVERTISEMENT

ವೀರಶೈವ ನಾಯಕರಿಗೆ ಅಪರಾಧಿ ಸ್ಥಾನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 18:30 IST
Last Updated 31 ಜುಲೈ 2012, 18:30 IST
ವೀರಶೈವ ನಾಯಕರಿಗೆ ಅಪರಾಧಿ ಸ್ಥಾನ
ವೀರಶೈವ ನಾಯಕರಿಗೆ ಅಪರಾಧಿ ಸ್ಥಾನ   

ಕೃಷ್ಣರಾಜಪುರ: `ಈಗ ರಾಜಕಾರಣ ಮೌಲ್ಯ ಕಳೆದುಕೊಂಡಿದ್ದು ಬಹಳಷ್ಟು ವೀರಶೈವ ಜನ ಪ್ರತಿನಿಧಿಗಳು ರಾಜಕೀಯವಾಗಿ ಅಪರಾಧಿ ಸ್ಥಾನದಲ್ಲಿದ್ದಾರೆ~ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವೀರಶೈವ ಯುವಕ, ಮಹಿಳಾ ಸಂಘದ ಕ್ಷೇತ್ರ ಘಟಕದ ವತಿಯಿಂದ ಸರ್ಕಾರಿ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 18ನೇ ವಾರ್ಷಿಕೋತ್ಸವ ಮತ್ತು ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜ್ಯದ ಉದ್ದಗಲಕ್ಕೂ ವೀರಶೈವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಇಂದು ವೀರಶೈವರು ರಾಜಕೀಯ ಶಕ್ತಿಯಾಗಿ ಬೆಳೆದಿಲ್ಲ ಎಂದರು.

ಸಾನಿಧ್ಯ ವಹಿಸಿದ್ದ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, `ಶರೀರ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಇಡುವ ನಿಟ್ಟಿನಲ್ಲಿ ದಾರ್ಶನಿಕರ ಚಿಂತನೆ ಮತ್ತು ಮಾರ್ಗದರ್ಶನ ಅನನ್ಯವಾದುದು~ ಎಂದರು.
ಶಾಸಕ ಎನ್.ಎಸ್.ನಂದೀಶ ರೆಡ್ಡಿ, ಸಂಸದ ಸುರೇಶ್ ಅಂಗಡಿ, ಪಾಲಿಕೆ ಸದಸ್ಯೆ ಕೆ.ಪೂರ್ಣಿಮಾ, ಆರ್. ಪೂರ್ಣಿಮಾ, ಎನ್.ವೀರಣ್ಣ, ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ಚಂದ್ರಯ್ಯ, ಜಗದೀಶ್, ಈಶ್ವರ ವಾಲಿ, ಸುಶೀಲಮ್ಮ ಉಪಸ್ಥಿತರಿದ್ದರು.

ಬಸವೇಶವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು ನೀಡಿದ ಪಾಲಿಕೆ ಸದಸ್ಯ ಬೈರತಿ ಎ.ಬಸವರಾಜ್, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.