ADVERTISEMENT

ವೆಬ್‌ಸೈಟ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 18:40 IST
Last Updated 21 ಆಗಸ್ಟ್ 2012, 18:40 IST

ಬೆಂಗಳೂರು: `ಬೆಂಗಳೂರು ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ಹಾಗೂ ಸುಂದರ ನಗರಗಳಲ್ಲೊಂದು. ಇದು ನಮ್ಮೆಲ್ಲರ ನಗರ. ಪೊಲೀಸ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಜನರ ಸುರಕ್ಷತೆ ಬಗ್ಗೆ ಸೂಕ್ತ ಕ್ರಮ ಕೈಗೊಂಡಿವೆ~

- ಅಸ್ಸಾಂ ಗಲಭೆ ನಂತರ ಸಾಮಾಜಿಕ ಸಂಪರ್ಕ ಜಾಲಗಳಲ್ಲಿ ಹರಿದಾಡಿದ ಹಲ್ಲೆ ಬೆದರಿಕೆ ವದಂತಿಗಳ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳ ಜನತೆ ಬೆಂಗಳೂರು ತೊರೆದಿರುವ ಬಗ್ಗೆ ಪ್ರಶ್ನಿಸಿದಾಗ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದು ಹೀಗೆ.

ಖಾಸಗಿ ಹೋಟೆಲೊಂದರಲ್ಲಿ ನಡೆದ ಸಮಾರಂಭದಲ್ಲಿ `ಇಂಡಿಯಾ ಫಾರ್ವರ್ಡ್~ ಟ್ರಸ್ಟ್‌ನ ವೆಬ್‌ಸೈಟ್‌ಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ವಿಚಾರದಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಮುಂದೆಯೂ ಅದೇ ರೀತಿ ಕರ್ತವ್ಯ ನಿರ್ವಹಿಸಲಿದ್ದಾರೆಂಬ ಆಶಯ ನನ್ನದು~ ಎಂದರು.

ಬಿಎಂಎಂ ಸಿಮೆಂಟ್ಸ್ ಪ್ರಾಯೋಜಕತ್ವದಲ್ಲಿ ನಗರದ ಮಲ್ಯ ಅದಿತಿ ಇಂಟರ್ ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿ ಅರ್ಜುನ್ ಬೀರ್ `ಭಾರತದ ಮುನ್ನಡೆ~ ಪರಿಕಲ್ಪನೆಯೊಂದಿಗೆ ರೂಪಿಸಿರುವ ವೆಬ್‌ಸೈಟ್ ಅನ್ನು ದ್ರಾವಿಡ್ ಉದ್ಘಾಟಿಸಿದರು.

ಆರ್ಥಿಕವಾಗಿ ಉತ್ತಮ ಸಾಮರ್ಥ್ಯ ಹೊಂದಿರುವ ಶಾಲೆಗಳು ಸಂಪನ್ಮೂಲಗಳ ಕೊರತೆಯಿರುವ ಸಮೀಪದ ಶಾಲೆಗಳಿಗೆ ನೆರವಾಗುವುದು, ಅಮೆರಿಕದ `ಮೆಡ್ರಿಕ್ಸ್~ ಸ್ವಯಂಸೇವಾ ಸಂಸ್ಥೆಯ ನೆರವಿನೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ತಂತ್ರಜ್ಞಾನ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರ್ಜುನ್ ತಿಳಿಸಿದರು.

ಕ್ರಿಕೆಟ್ ವೀಕ್ಷಣೆ ವಿವರಣೆಗಾರ ಚಾರು ಶರ್ಮ ಕಾರ್ಯಕ್ರಮ ನಿರೂಪಿಸಿದರು. ಇಂಡಿಯಾ ಫಾರ್ವರ್ಡ್ ಟ್ರಸ್ಟ್‌ನ ವೆಬ್ www.indiaforward.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.