ADVERTISEMENT

ಶ್ರವಣದೋಷ ಶಸ್ತ್ರಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:43 IST
Last Updated 30 ಅಕ್ಟೋಬರ್ 2017, 19:43 IST
ಶ್ರವಣ ದೋಷದ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು ಸೋಮವಾರ ಕೇಕ್ ಕತ್ತರಿಸಿ ಸಂಭ್ರಮಿಸಿದರು. (ಎಡದಿಂದ) ಮಹಾವೀರ್ ಜೈನ್ ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಡಿ.ಮಾರ್ಕರ್, ಹಿರಿಯ ಸರ್ಜನ್ ಡಾ. ಜೆ.ಎಂ.ಹನ್ಸ್, ಡಾ. ವಾಸಂತಿ ಆನಂದ್, ಕಾರ್ಯದರ್ಶಿ ಕಿಶನ್ ಲಾಲ್ ಕೊಠಾರಿ ಹಾಗೂ ಮಕ್ಕಳ ಪೋಷಕರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಶ್ರವಣ ದೋಷದ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು ಸೋಮವಾರ ಕೇಕ್ ಕತ್ತರಿಸಿ ಸಂಭ್ರಮಿಸಿದರು. (ಎಡದಿಂದ) ಮಹಾವೀರ್ ಜೈನ್ ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಡಿ.ಮಾರ್ಕರ್, ಹಿರಿಯ ಸರ್ಜನ್ ಡಾ. ಜೆ.ಎಂ.ಹನ್ಸ್, ಡಾ. ವಾಸಂತಿ ಆನಂದ್, ಕಾರ್ಯದರ್ಶಿ ಕಿಶನ್ ಲಾಲ್ ಕೊಠಾರಿ ಹಾಗೂ ಮಕ್ಕಳ ಪೋಷಕರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅತಿಕಿವುಡುತನ ಸಮಸ್ಯೆಗೆ (ಪ್ರಫೌಂಡ್ ಬೈಲ್ಯಾಕಲ್ ಸೆನ್ಸರಿ ನ್ಯೂರಲ್ ಹಿಯರಿಂಗ್ ಲಾಸ್) ‘ವೆರಿಯಾ’ ಶಸ್ತ್ರಚಿಕಿತ್ಸೆ ಪಡೆದು ಗುಣಮುಖ ಹೊಂದಿರುವ 75 ಮಕ್ಕಳು, ಅವರ ಪೋಷಕರು ಹಾಗೂ ವೈದ್ಯರ ಸಮಾಗಮ ಭಗವಾನ್‌ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಸೋಮವಾರ ನಡೆಯಿತು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ‘ಈ ಕಾಯಿಲೆಗೆ ರಾಜ್ಯದಲ್ಲಿ ಮಾನಸ ಕಾಕ್ಲಿಯರ್‌ ಇಂಪ್ಲಾಂಟ್‌ ಮತ್ತು ಇಎನ್‌ಟಿ ಸೆಂಟರ್‍ ಚಿಕಿತ್ಸೆಯನ್ನು ಪರಿಚಯಿಸಿತ್ತು. ಇದಕ್ಕೆ ಸುಮಾರು ₹ 7 ಲಕ್ಷ ವೆಚ್ಚವಾಗುತ್ತಿತ್ತು. ಆರೋಗ್ಯ ಸಚಿವನಾಗಿದ್ದಾಗ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 5 ಲಕ್ಷ ಪರಿಹಾರ ನೀಡುವ ಯೋಜನೆ ಆರಂಭಿಸಲಾಗಿತ್ತು. 75 ಮಕ್ಕಳಿಗೆ ದೇಶದಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿರುವ ವೈದ್ಯರ ಪ್ರಯತ್ನ ಶ್ಲಾಘನೀಯ’ ಎಂದರು.

ಮಾನಸ ಕಾಕ್ಲಿಯರ್‌ ಇಂಪ್ಲಾಂಟ್‌ ಮತ್ತು ಇಎನ್‌ಟಿ ಸೆಂಟರ್‌ ಮುಖ್ಯಸ್ಥೆ ವಾಸಂತಿ ಆನಂದ್, ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಮ್ಮ ಕೇಂದ್ರದ ಸಹಯೋಗದಲ್ಲಿ ಗ್ರೀಸ್‍ನ ವೈದ್ಯ ಡಾ. ಟ್ರಿಪಾನ್‌ ‘ವೆರಿಯಾ’ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ ಕಂಡುಹಿಡಿದಿದ್ದಾರೆ ಎಂದರು.

ADVERTISEMENT

ಕಾಕ್ಲಿಯರ್‌ ಇಂಪ್ಲಾಂಟ್‌ ಸರ್ಜನ್‌ ಪ್ರೊ. ಜೆ.ಎಂ.ಹನ್ಸ್, ‘8ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ. 1,000 ಮಕ್ಕಳಲ್ಲಿ 50 ಮಕ್ಕಳು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.