ADVERTISEMENT

‘ಸಂಕುಚಿತ ಮನೋಭಾವದಿಂದ ಪ್ರತಿಭೆ ವ್ಯರ್ಥ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 20:12 IST
Last Updated 6 ಮಾರ್ಚ್ 2018, 20:12 IST
ಕಾರ್ಯಕ್ರಮವನ್ನು ಡಾ.ಪಿ.ಶ್ಯಾಮರಾಜು ಉದ್ಘಾಟಿಸಿದರು. ಎಸ್‌.ವೈ.ಕುಲಕರ್ಣಿ, ವಿ.ಕೆ. ಅತ್ರೆ ಚಿತ್ರದಲ್ಲಿದ್ದಾರೆ
ಕಾರ್ಯಕ್ರಮವನ್ನು ಡಾ.ಪಿ.ಶ್ಯಾಮರಾಜು ಉದ್ಘಾಟಿಸಿದರು. ಎಸ್‌.ವೈ.ಕುಲಕರ್ಣಿ, ವಿ.ಕೆ. ಅತ್ರೆ ಚಿತ್ರದಲ್ಲಿದ್ದಾರೆ   

ಬೆಂಗಳೂರು: ‘ಭಾರತೀಯ ವಿದ್ಯಾರ್ಥಿ ಸಮುದಾಯ ಹೊಂದಿರುವ ಸಂಕುಚಿತ ಮನೋಭಾವ ಹಾಗೂ ಸೀಮಿತ ಯೋಜನೆಗಳಿಂದಾಗಿ ಪ್ರತಿಭೆಗಳು ವ್ಯರ್ಥವಾಗುತ್ತಿವೆ’ ಎಂದು ಹಿರಿಯ ವಿಜ್ಞಾನಿ ಡಾ.ವಿ.ಕೆ. ಅತ್ರೆ ತಿಳಿಸಿದರು.

ರೇವಾ ವಿಶ್ವವಿದ್ಯಾಲಯದಲ್ಲಿ ನಡೆದ ‘ರೇವಾ ರಿಸರ್ಚ್ ಕನ್‍ಕ್ಲೇವ್- 2018’ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಪೂರ್ಣಗೊಳಿಸಿದ ಕೂಡಲೇ ಹೆಚ್ಚಿನ ಯುವಕರು ಉದ್ಯೋಗಕ್ಕಾಗಿ ಹುಡುಕುತ್ತಾರೆ. ಸಂಶೋಧನಾ ಆಸಕ್ತಿಯನ್ನು ಬಿಡುತ್ತಾರೆ. ಇದರಿಂದಾಗಿ ನವ ವಿಜ್ಞಾನಿಗಳು ಹಾಗೂ ಸಂಶೋಧಕರು ಹುಟ್ಟುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ತಂತ್ರಜ್ಞಾನವು ಬದುಕಿನ ಭಾಗವಾಗಿ‌ರಬೇಕು. ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಶ್ಯಾಮರಾಜು, ‘ವಿಶ್ವದ ಅಗ್ರ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ರೇವಾ ವಿಶ್ವವಿದ್ಯಾಲಯ ಸ್ಥಾನ ಪಡೆಯಬೇಕು. ಹೀಗಾಗಿ ಹೊಸ ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತಿದೆ, ಸಂಶೋಧನೆಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.