ಬೆಂಗಳೂರು: `ವಿದೇಶಿ ಬಂಡವಾಳ ಹೂಡಿಕೆಯು ಚಿಲ್ಲರೆ ವ್ಯಾಪಾರಿಗಳಿಗೆ ಕೆಡಕು ಉಂಟು ಮಾಡದಂತೆ ಕಾರ್ಯಗತವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚೇ ಇದೆ~ ಎಂದು ಕೃಷಿ ವಿಜ್ಞಾನ ವಿವಿಯ ನಿವೃತ್ತ ಕುಲಪತಿ ಡಾ. ಎಸ್.ಬಿಸಿಲಯ್ಯ ಹೇಳಿದರು.
ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯು ನ್ಯಾಷನಲ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಕೇಂದ್ರ ಬಜೆಟ್~ ಕುರಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಬಾರಿಯ ಬಜೆಟ್‌ನಲ್ಲಿ ಕೃಷಿಕರಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ಕೇವಲ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಕೇವಲ ಸಬ್ಸಿಡಿ ನೀಡುವುದು ಮಾತ್ರ ಅಭಿವೃದ್ದಿಯಲ್ಲ~ ಎಂದು ಹೇಳಿದರು.
`ಸಬ್ಸಿಡಿ ವಿತರಣೆಯ ಮಾನದಂಡದ ಬಗ್ಗೆ ಅವಶ್ಯಕವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಆರ್ಥಿಕವಾಗಿ ಮುಂದುವರಿದಿರುವ ಕೃಷಿಕರು ಮತ್ತು ದೊಡ್ಡ ಮಟ್ಟದ ಕೈಗಾರಿಕೆಗಳಿಗೆ ಸಬ್ಸಿಡಿಯ ಅಗತ್ಯವಿರುವುದಿಲ್ಲ. ಸರ್ಕಾರ ಸಬ್ಸಿಡಿ ವಿತರಣೆಯಲ್ಲಿ ಲಾಬಿಗೆ ಮಣಿಯದಂತೆ ಎಚ್ಚರವಹಿಸಬೇಕು~ ಎಂದರು.
`ದೇಶದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಶಾಖೆಯು ಪ್ರಾರಂಭಗೊಳ್ಳುವುದಕ್ಕೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಸರಿಯಲ್ಲ. ಪ್ರಸ್ತುತವಿರುವ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು~ ಎಂದು ಹೇಳಿದರು. ಸಂಸ್ಥೆ ಅಧ್ಯಕ್ಷ ಎ. ಜೆ.ಸದಾಶಿವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.