
ಪ್ರಜಾವಾಣಿ ವಾರ್ತೆಬೆಂಗಳೂರು: ಸಹಾಯಧನ ನೀಡುವ ಸಂಬಂಧ ಕನ್ನಡದ ಗುಣಾತ್ಮಕ ಚಲನಚಿತ್ರಗಳ ಸಬ್ಸಿಡಿ ಸಮಿತಿ ಆಯ್ಕೆ ಮಾಡಿರುವ ಚಿತ್ರಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಸಮಿತಿಯ ಅಧ್ಯಕ್ಷ, ಚಿತ್ರನಟ ಎಸ್. ಶಿವರಾಂ ಕೋರಿದರು.
ಚಲನಚಿತ್ರಗಳ ಆಯ್ಕೆ ವಿವಾದದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, `ಸಮಿತಿಯು ಚಲನಚಿತ್ರಗಳನ್ನು ಪ್ರಾಮಾಣಿಕವಾಗಿ ಆಯ್ಕೆ ಮಾಡಿದೆ. ಸದಸ್ಯರೆಲ್ಲರೂ ಆಮಿಷಕ್ಕೆ ಒಳಗಾಗಿದ್ದಾರೆ ಎನ್ನುವುದು ಸರಿಯಲ್ಲ~ ಎಂದರು.
`ಸದಸ್ಯರಾದ ಸುರೇಶ್ ಮಂಗಳೂರು ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಕ್ಷಮಾಪಣಾ ಪತ್ರ ನೀಡಿದ್ದರೂ ಅದು ಸಮಾಧಾನ ತಂದಿಲ್ಲ. ಸದಸ್ಯರ ಗಮನಕ್ಕೆ ತಾರದೆ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ~ ಎಂದರು. `ನಾನೂ ಹಣ ಸ್ವೀಕರಿಸಿದ್ದೇನೆ ಎಂದು ಕೆಲವರು ತೆರೆಮರೆಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.