ಬೆಂಗಳೂರು:ಸರಗಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ಹನುಮಂತನಗರ ಠಾಣೆ ಪೊಲೀಸರು ಆರೋಪಿಗಳಿಂದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗೋರಿಪಾಳ್ಯದ ನಿವಾಸಿಗಳಾದ ಇಬ್ರಾಹಿಂ ಪಾಷಾ (24), ಸೈಯ್ಯದ್ ಇಸ್ಮಾಯಿಲ್ (21) ಮತ್ತು ಫಾಜಲ್ ಪಾಷಾ (23) ಬಂಧಿತರು. ಆರೋಪಿಗಳು ಏ.20 ರಂದು ಶ್ರಿನಗರ ಬಸ್ ನಿಲ್ದಾಣದ ಬಳಿ ಆಟೊದಲ್ಲಿ ಕುಳಿತು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಹಾಗೂ ವಾಯು ವಿಹಾರ ಮಾಡುತ್ತಿದ್ದ ಮಹಿಳೆಯರಿಂದ ಈ ದುಷ್ಕರ್ಮಿಗಳು ಸರಗಳನ್ನು ದೋಚುತ್ತಿದ್ದರು.ಆರೋಪಿಗಳ ವಿರುದ್ಧ ಹನುಮಂತನಗರ, ಗಿರಿನಗರ, ಶಂಕರಪುರ, ಕೆಂಪೇಗೌಡ ನಗರ, ಬಸವನಗುಡಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಸರಗಳವು ಪ್ರಕರಣಗಳು ದಾಖಲಾಗಿವೆ.
ಬಂಧಿತರಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 615 ಗ್ರಾಂ ಚಿನ್ನಾಭರಣ, ಒಂದು ಆಟೊ ಮತ್ತು ಒಂದು ಬೈಕ್ ಅನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.