ADVERTISEMENT

ಸಹಕಾರ ಬ್ಯಾಂಕ್ ಗೊಟ್ಟಿಗೆರೆ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ತ್ಯಾಗರಾಜ್ ಕೋ ಆಪರೇಟಿವ್ ಬ್ಯಾಂಕ್‌ನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಶಾಖೆಯನ್ನು ಇತ್ತೀಚೆಗೆ ರಾಮಕೃಷ್ಣಮಠದ ಹರ್ಷಾನಂದಜಿ ಮಹಾರಾಜ್ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ಸುಂದರೇಗೌಡ, ಉಪಾಧ್ಯಕ್ಷ ವಿ.ಎನ್. ವೀರನಾಗಪ್ಪ, ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಗೋವಿಂದರಾವ್ ಕುರ್ಡೇಕರ್ ಮತ್ತಿತರರು ಚಿತ್ರದಲ್ಲಿದ್ದಾರೆ

ಬೆಂಗಳೂರು: ನಗರದ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕಿನ 12ನೇ ಶಾಖೆಯನ್ನು ಬನ್ನೇರುಘಟ್ಟ ಮುಖ್ಯ ರಸ್ತೆಯ ಗೊಟ್ಟಿಗೆರೆಯಲ್ಲಿ ಇತ್ತೀಚೆಗೆ ರಾಮಕೃಷ್ಣಮಠದ ಹರ್ಷಾನಂದಜಿ ಮಹಾರಾಜ್ ಸ್ವಾಮೀಜಿ ಉದ್ಘಾಟಿಸಿದರು.
 
ಹರ್ಷಾನಂದಜಿ ಮಹಾರಾಜ್ ಸ್ವಾಮೀಜಿ ಮಾತನಾಡಿದ ಅವರು` ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕಾದರೆ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ತ್ಯಾಗದ ಮನೋಭಾವ ಹೆಚ್ಚು ಇರಬೇಕು. ಪ್ರತಿಯೊಬ್ಬರೂ ಸಮಾಜ ಸೇವೆಗೆ ಒತ್ತು ನೀಡಬೇಕೇ ಹೊರತು, ಹಣದ ಬೆನ್ನು ಹತ್ತಿ ಹೋಗಬಾರದು' ಎಂದು ಕಿವಿಮಾತು ಹೇಳಿದರು.
 
ಬ್ಯಾಂಕಿನ ಅಧ್ಯಕ್ಷ ಸುಂದರೇಗೌಡ ಮಾತನಾಡಿ, `2011-12ನೇ ಸಾಲಿನಲ್ಲಿ ಬ್ಯಾಂಕ್ 4,500 ಕೋಟಿ ರೂಪಾಯಿ ವಹಿವಾಟು ನಡೆಸಿದೆ' ಎಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಶಾಸಕ ಎಂ.ಕೃಷ್ಣಪ್ಪ, ಬ್ಯಾಂಕಿನ ಉಪಾಧ್ಯಕ್ಷ ವಿ.ಎನ್. ವೀರನಾಗಪ್ಪ, ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಗೋವಿಂದರಾವ್ ಕುರ್ಡೇಕರ್ ಉಪಸ್ಥಿತರಿದ್ದರು.
 
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.