ADVERTISEMENT

ಸಾಹಿತ್ಯ ಪರಿಷತ್‌: ವಿವಿಧ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST
ಪಿ.ಎನ್‌. ಶ್ರೀಪತಿರಾವ್‌ (ಕುಳಿತಿರುವವರು), ವಿಠಲ್‌ ಹೆಗಡೆ, ವಿಜಯಾ ಸುಬ್ಬರಾಜ್‌, ಎಚ್‌.ಎಲ್‌.ಪುಷ್ಪಾ ಅವರಿಗೆ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ,  ಎಚ್‌.ಎಸ್‌.  ವೆಂಕಟೇಶಮೂರ್ತಿ, ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಪದ್ಮಾ ಶೇಖರ್‌ ಇದ್ದಾರೆ. –ಪ್ರಜಾವಾಣಿ ಚಿತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಡಾ. ವಿಜಯಾ ಸುಬ್ಬರಾಜ್ ಅವರಿಗೆ ‘ಮನೋಹರಿ ಪಾರ್ಥಸಾರಥಿ ಮನುಶ್ರೀ’, ಡಾ.ಎಚ್.ಎಲ್.ಪುಷ್ಪ ಅವರಿಗೆ ‘ಪಂಕಜಶ್ರೀ’, ಉದ್ಯಮಿಗಳಾದ ಪಿ.ಎನ್. ಶ್ರೀಪತಿರಾವ್ ಹಾಗೂ ವಿಠಲ್ ಹೆಗಡೆ ಅವರಿಗೆ ‘ಲಕ್ಷ್ಮಿದೇವಿ ಮತ್ತು ಎಸ್.ರಾಮಚಂದ್ರ ಬಾಯರ್ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

‘ಪ್ರಜಾವಾಣಿ’ಯ ದೆಹಲಿಯ ಹಿರಿಯ ವರದಿಗಾರ ಡಿ.ಉಮಾಪತಿ ಅವರಿಗೆ ‘ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ದತ್ತಿ ಪ್ರಶಸ್ತಿ’ ದೊರೆತಿದೆ. ಆದರೆ, ಅವರು ಗೈರು ಹಾಜರಾಗಿದ್ದರು.

ADVERTISEMENT

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ಗಾಂಧೀಜಿ ದೇಶಕ್ಕೆ ರಾಷ್ಟ್ರಪಿತ ಎನಿಸಿಕೊಂಡರೂ, ಅವರ ವೈಯಕ್ತಿಕ ಜೀವನದಲ್ಲಿ ಹಲವು ಬಿಕ್ಕಟ್ಟುಗಳಿದ್ದವು. ಅವರು ಪುರುಷ ಅಹಂಕಾರಕ್ಕೆ ಒಳಗಾಗಿ ಕಸ್ತೂರ ಬಾ ಅವರಿಗೆ ಗೌರವ ನೀಡುತ್ತಿರಲಿಲ್ಲ. ಮಗನಿಗೆ ಸ್ವತಂತ್ರವಾಗಿ ಜೀವಿಸಲು ಬಿಟ್ಟಿರಲಿಲ್ಲ ಎಂಬ ಅಂಶ ಇತ್ತೀಚೆಗೆ ಪ್ರಕಟಗೊಂಡ ಕೃತಿಗಳಲ್ಲಿ ಉಲ್ಲೇಖಗೊಂಡಿದೆ’ ಎಂದರು.

‘ಕಸ್ತೂರ ಬಾ ಎದುರಿಸಿದ ಸಮಸ್ಯೆಗಳು ಹಾಗೂ ಗಾಂಧೀಜಿ ಅವರ ವ್ಯಕ್ತಿತ್ವವನ್ನು ವಿಜಯಾ ಸುಬ್ಬರಾಜ್‌ ಅವರು ಬೆಸುಗೆ–ಬಂಧನ ಕೃತಿಯಲ್ಲಿ ಚಿತ್ರಿಸಿದ್ದಾರೆ. ಕಸ್ತೂರ ಬಾ ಅವರನ್ನು ನಾಯಕಿಯಂತೆ ತೋರಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.