ADVERTISEMENT

ಸಿಎನ್‌ಆರ್‌ಗೆ ಕಾಡಿದ ನೆನಪುಗಳು

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 19:37 IST
Last Updated 10 ಜನವರಿ 2014, 19:37 IST

ಬೆಂಗಳೂರು: ‘ದೇಶದ ಈ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಲ್ಲಿ 55 ವರ್ಷಗಳ ಹಿಂದೆ ನಾನು ಪ್ರಾಧ್ಯಾಪಕನಾಗಿ ನೇಮಕ­­ಗೊಂಡಾಗ ನನಗೆ ಸಿಗುತ್ತಿದ್ದ ಸಂಬಳ ರೂ 4,500 ಆಗಿತ್ತು. ಆಗಿನ ನೆನಪುಗಳು ಇನ್ನೂ ಹಸಿರಾಗಿವೆ’ ಎಂದು ಹಿರಿಯ ವಿಜ್ಞಾನಿ ಪ್ರೊ. ಸಿಎನ್‌ಆರ್‌ ರಾವ್‌ ಮೆಲುಕು ಹಾಕಿದರು.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಹಳೆಯ ವಿದ್ಯಾರ್ಥಿ­ಗಳ ಸಂಘ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮರಗಳ ಮೇಳೆಯಲ್ಲಿ ಓಡಾಡಿದ ಆ ದಿನಗಳು, ಕ್ಲಾಸ್‌ರೂಮ್‌ಗಳಲ್ಲಿ ಮಾಡಿದ ಪಾಠಗಳನ್ನು ನೆನಪಿಸಿ­ಕೊಂಡರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ಪ್ರೊ. ಆರ್ಕಾಟ್‌ ರಾಮಚಂದ್ರನ್‌ ಮಾತ­ನಾಡಿ, ‘ರಾಜಕಾರಣಿಗಳು ಮೂರ್ಖರು ಎಂಬ ಪ್ರೊ. ರಾವ್‌ ಅವರ ಹೇಳಿಕೆಯಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.