ಬೆಂಗಳೂರು: ಕಾನೂನು ಸಚಿವ ಸುರೇಶ್ ಕುಮಾರ್ ಸಿಬಿಐ ಅನ್ನು ‘ಕಾಂಗ್ರೆಸ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್’ ಎಂದು ಮಂಗಳವಾರ ವಿಧಾನಸಭೆಯಲ್ಲಿ ಬಣ್ಣಿಸಿದ್ದನ್ನು ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ ತೀವ್ರವಾಗಿ ವಿರೋಧಿಸಿದರು.ಸುರೇಶ್ ಕುಮಾರ್ ಹೇಳಿಕೆಯ ಬಗ್ಗೆ ವಿಧಾನ ಪರಿಷತ್‌ನಲ್ಲಿ ಬುಧವಾರ ಆಕ್ಷೇಪ ವ್ಯಕ್ತಪಡಿಸಿದ ಸುದರ್ಶನ್, ‘ಸಿಬಿಐ ಬಗ್ಗೆ ಅವರಿಗೆ (ಸುರೇಶ್ ಕುಮಾರ್) ನಂಬಿಕೆ ಇಲ್ಲದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ, ಆದರೆ ಸರ್ಕಾರದ ಪ್ರತಿನಿಧಿಯಾಗಿ ಅವರು ಜವಾಬ್ದಾರಿಯುತವಾಗಿ ಮಾತನಾಡಬೇಕು’ ಎಂದರು.
ಕಾನೂನು ಸಚಿವರಾಗಿ ಅವರು ಬಿಜೆಪಿಯ ಅಭಿಪ್ರಾಯ ಹೇಳುವ ಅಗತ್ಯ ಇಲ್ಲ ಎಂದು ಟೀಕಿಸಿದರು. ‘ಸಭಾಪತಿಗಳೇ ನೀವೂ ಸರ್ಕಾರದ ಕಿವಿ ಹಿಂಡಿ ಬುದ್ಧಿಹೇಳಬೇಕು’ ಎಂದು ಅವರು ಶಂಕರಮೂರ್ತಿ ಅವರನ್ನು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.