ಬೊಜ್ಜು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ವ್ಯಾಪಿಸುತ್ತಿರುವ ವೈದ್ಯಕೀಯ ಸಮಸ್ಯೆಯಾಗಿದೆ. ಸುಮಾರು 30 ದಶಲಕ್ಷ ಭಾರತೀಯರು ಅತಿ ತೂಕ, ಸ್ಥೂಲಕಾಯ ಅಥವಾ ಬೊಜ್ಜಿನಿಂದ ಉಂಟಾಗುವ ಅನಾರೋಗ್ಯಗಳಿಂದ ಬಳಲುತ್ತಿದ್ದು, ಈ ಸಂಖ್ಯೆ ಹೆಚ್ಚುತ್ತಲೇ ಇದೆ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ). ಅದರಲ್ಲಿಯೂ ಶೇ 20ರಷ್ಟು ಶಾಲೆಗೆ ಹೋಗುವ ಮಕ್ಕಳೇ ಅತಿ ತೂಕ ಹೊಂದುತ್ತಿದ್ದಾರೆ ಎನ್ನುವುದು ಆತಂಕಕಾರಿಯಾಗಿದೆ. ಈ ಅಪಾಯಗಳನ್ನು ಗಮನಿಸಿದಾಗ ನಮ್ಮ ಜೀವನಶೈಲಿಯಲ್ಲಿ ಯಾವುದು ಬದಲಾಗಿದೆ? ಈ ಸಮಸ್ಯೆಗಳನ್ನು ಎದುರಿಸಲು ನಾವು ಏನು ಮಾಡಬೇಕು? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಪ್ರಮುಖವಾಗಿ ಎರಡು ವಿಷಯಗಳಲ್ಲಿ ನಮ್ಮ ಜೀವನಕ್ರಮ ಬದಲಾಗಿದೆ. ಒಂದು, ನಾವು ಹೆಚ್ಚು ಕುಳಿತೇ ಕಾಲಕಳೆಯುತ್ತೇವೆ. ಎರಡನೆಯದು, ನಾವು ತಿನ್ನುವ ಆಹಾರದಲ್ಲಿನ ಕ್ಯಾಲೊರಿಗಳ ಬಗೆ ಹೆಚ್ಚಾಗಿದೆ.
ನೂರಾರು ರೋಗಿಗಳ ಆಹಾರ ಕ್ರಮವನ್ನು ನಾವು ಗಮನಿಸಿದಾಗ ಅಧಿಕ ತೂಕವಿರುವ ಹೆಚ್ಚಿನ ಜನರು ಶಕ್ತಿಗಾಗಿ ಸಕ್ಕರೆ ಮತ್ತು ಸರಳ ಶರ್ಕರಪಿಷ್ಠಗಳ ಮೇಲೆ ತೀವ್ರ ಅವಲಂಬಿತರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ತೂಕವನ್ನು ಇಳಿಸಿ ಆರೋಗ್ಯಪೂರ್ಣ ಶರೀರ ಕಾಯ್ದುಕೊಳ್ಳಲು ಇಚ್ಛಿಸುವ ವ್ಯಕ್ತಿಯಿಂದ ಇದನ್ನು ಬದಲಿಸುವ ಅಗತ್ಯವಿದೆ ಎನ್ನುತ್ತಾರೆ ಯಶವಂತಪುರದಲ್ಲಿನ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯ ಮುಖ್ಯ ಶಸ್ತ್ರವೈದ್ಯ ಡಾ.ಎಚ್.ವಿ.ಶಿವರಾಮ್.
ಕೊಬ್ಬು ಕರಗಿಸುವ ಚಿಕಿತ್ಸೆಯ ಹೊಸ ವಿಧಾನಗಳೊಂದಿಗೆ ನಿಮ್ಮ ಜೀವನವನ್ನು ಸುಧಾರಿಸುವ ಸಮಯ ಬಂದಿದೆ. ಕೊಲಂಬಿಯಾ ಏಷ್ಯಾದ ಬಹು ವಿಭಾಗೀಯ ತಂಡ ನಡೆಸುತ್ತಿರುವ ಕೊಬ್ಬು ನಿರ್ಮೂಲನಾ ಚಿಕಿತ್ಸಾ ಕಾರ್ಯಕ್ರಮದಿಂದ ನಿಮ್ಮ ಜೀವನ ಮತ್ತು ಆರೋಗ್ಯವನ್ನು ಪರಿವರ್ತಿಸಲು ಬದ್ಧವಾಗಿದೆ ಎಂದು ಡಾ.ಶಿವರಾಮ್ ಹೇಳುತ್ತಾರೆ.
ಕೊಬ್ಬು ಕರಗಿಸುವ ಚಿಕಿತ್ಸೆ ಒಬ್ಬ ವ್ಯಕ್ತಿಯ ತಿನ್ನುವ ಸಾಮರ್ಥ್ಯವನ್ನು ಮಿತಿಗೊಳಿಸುವುದರಿಂದ ಹೊಟ್ಟೆಯ ಗಾತ್ರವನ್ನು ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಸ್ಥೂಲಕಾಯವುಳ್ಳ ವಯಸ್ಕರು ಮತ್ತು ಹರೆಯದವರು ಜೀವನ ಪರ್ಯಂತ ತಮ್ಮ ತೂಕಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಲೇ ಇರುತ್ತಾರೆ. ಸ್ಥೂಲಕಾಯವುಳ್ಳ 40 ವರ್ಷ ಮೇಲ್ಪಟ್ಟವರಿಗೆ ಬೇರೆ ವಿಧಾನಗಳಿಂದ ಕೊಬ್ಬು ಕರಗಿಸಲು ಸಾಧ್ಯವಿಲ್ಲ. ಅಂತಹವರಿಗೆ ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹೇಳುತ್ತಾರೆ ಡಾ.ಶಿವರಾಮ್.
ವಿವರಗಳಿಗೆ ಡಾ.ಶಿವರಾಮ್ ಅವರನ್ನು 98450 43920/080-3989 8969 ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.