ADVERTISEMENT

ಸ್ಫೂರ್ತಿಧಾಮಕ್ಕೆ ಭೂಮಿ ಪ್ರಶ್ನಿಸಿ ಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 20:26 IST
Last Updated 10 ಏಪ್ರಿಲ್ 2013, 20:26 IST

ಬೆಂಗಳೂರು: `ವಿವೇಕಾನಂದ ಸ್ಫೂರ್ತಿ ಧಾಮ' ನಿರ್ಮಿಸಲು ಮೈಸೂರಿನ ಮಹಾರಾಣಿ ಎನ್‌ಟಿಎಂ ಶಾಲೆ ಇರುವ ಸ್ಥಳವನ್ನು ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಮೈಸೂರಿನ ಮೀರಾ ನಾಯಕ್ ಮತ್ತು ಇತರರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

`ಶಾಲೆಯ ಪಕ್ಕದಲ್ಲಿ ಗಣೇಶ ಮಂದಿರ ಇದೆ. ಅಲ್ಲಿಗೆ ಸ್ವಾಮಿ ವಿವೇಕಾನಂದರು ಭೇಟಿ ನೀಡುತ್ತಿದ್ದರಂತೆ. ವಿವೇಕಾನಂದರ ಸ್ಮರಣಾರ್ಥವಾಗಿ ಅಲ್ಲಿ ಸ್ಫೂರ್ತಿ ಧಾಮ ನಿರ್ಮಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಶಾಲೆಯ ಜಾಗವನ್ನು ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ ಮಾಡಲು ಸರ್ಕಾರ ನಿರ್ಧರಿಸಿದೆ' ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

17 ಕೊಠಡಿಗಳ ಸೌಲಭ್ಯ ಇರುವ ಶಾಲೆ ಇದು. ಈ ಶಾಲೆಯನ್ನು ಪಕ್ಕದಲ್ಲಿರುವ ಮೂರು ಕೊಠಡಿಗಳ ಶಾಲೆಯೊಂದಕ್ಕೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ ಎಂದು ವಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.