ADVERTISEMENT

ಹಿರಿಯರ ಮೇಲೆ ದೌರ್ಜನ್ಯ; ನಿತ್ಯ 40 ಕರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:59 IST
Last Updated 1 ಅಕ್ಟೋಬರ್ 2017, 19:59 IST
ಹಿರಿಯರ ಮೇಲೆ ದೌರ್ಜನ್ಯ; ನಿತ್ಯ 40 ಕರೆ
ಹಿರಿಯರ ಮೇಲೆ ದೌರ್ಜನ್ಯ; ನಿತ್ಯ 40 ಕರೆ   

ಬೆಂಗಳೂರು: ನಗರದಲ್ಲಿ ಹಿರಿಯ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಪ್ರತಿದಿನ ‘ಹಿರಿಯ ನಾಗರಿಕರ ಸಹಾಯವಾಣಿ–1090’ಕ್ಕೆ 40ಕ್ಕೂ ಹೆಚ್ಚು ಕರೆಗಳು ಬರುತ್ತಿವೆ.

ನಗರ ಪೊಲೀಸರು ಹಾಗೂ ನೈಟಿಂಗೆಲ್ ಮೆಡಿಕಲ್‌ ಟ್ರಸ್ಟ್‌ ಸಹಯೋಗದಲ್ಲಿ ಈ ಸಹಾಯವಾಣಿ ಆರಂಭಿಸಲಾಗಿದೆ.

‘ಹಿರಿಯ ನಾಗರಿಕರು ಹೆಚ್ಚಾಗಿ ಆಸ್ತಿ, ಕುಟುಂಬ ಜಗಳ ಹಾಗೂ ಮಕ್ಕಳಿಂದ ಮಾನಸಿಕ ಹಾಗೂ ದೈಹಿಕ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಕರೆಗಳ ಸಂಖ್ಯೆ ಹೆಚ್ಚಿದೆ’ ಎಂದು ಟ್ರಸ್ಟ್‌ನ ರಾಧಾಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದೂರುಗಳನ್ನು ಹೇಳಿಕೊಳ್ಳಲು ಹಿರಿಯ ನಾಗರಿಕರು ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಅವರ ಮನೆಗೆ ಹತ್ತಿರದಲ್ಲಿರುವ ಪೊಲೀಸ್ ಠಾಣೆಗಳ ಸಿಬ್ಬಂದಿ ಮೂಲಕ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.