
ಪ್ರಜಾವಾಣಿ ವಾರ್ತೆಬೆಂಗಳೂರು: ಹಿಂದಿ ಭಾಷೆಯ ಅಭಿವೃದ್ದಿಯಲ್ಲಿ ಸುಮಾರು 45 ವರ್ಷಗಳ ಸೇವೆಯನ್ನು ಪರಿಗಣಿಸಿ ಡಾ.ಬಿ.ಜಿ.ಹಿರೇಮಠ್ ಅವರಿಗೆ ಅಲಹಾಬಾದ್‌ನ ವಿಶ್ವ ಹಿಂದಿ ಸಾಹಿತ್ಯ ಸಂಸ್ಥಾನವು ‘ರಾಷ್ಟ್ರಭಾಷಾ ಸಮ್ಮಾನ್’ ಪ್ರಶಸ್ತಿಯನ್ನು ನೀಡಿದೆ.
‘ಹಿಂದಿ ಮತ್ತು ಕನ್ನಡ ಸಂತ-ಶರಣರ ಸಾಹಿತ್ಯದಲ್ಲಿ ದಾರ್ಶನಿಕ ಸಿದ್ಧಾಂತ’ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ ಹಿರೇಮಠ್ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ವಿಶ್ವ ಹಿಂದಿ ಸಾಹಿತ್ಯ ಸಂಸ್ಥಾನವು ಈ ಗೌರವ ನೀಡಿದೆ. ಅಲಹಾಬಾದ್‌ನಲ್ಲಿ ಇತ್ತೀಚೆಗೆ ನಡೆದ 8ನೇ ಹಿಂದಿ ಸಾಹಿತ್ಯ ಮೇಳದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.