ADVERTISEMENT

ಹಿರೋಶಿಮಾ – ನಾಗಾಸಾಕಿ ಶೋಕಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST
ಹಿರೋಶಿಮಾ– ನಾಗಾಸಾಕಿ ಮೇಲೆ ಬಾಂಬ್‌ ದಾಳಿಯ 69ನೇ ವರ್ಷದ ಶೋಕಾಚರಣೆ ಅಂಗವಾಗಿ ಬಾರ್ನ್‌ಫ್ರೀ ಕಲಾ ಶಾಲೆಯು ನಗರದ ‘ನಮ್ಮ ಮೆಟ್ರೊ’ ರಂಗೋಲಿ ಕಲಾ­ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಪಾನ್‌ ಮತ್ತು ನಗರದ ಶಾಲೆಗಳ ವಿದ್ಯಾರ್ಥಿಗಳು ಒಂದೇ ಕ್ಯಾನ್ವಾಸ್‌ನಲ್ಲಿ ಚಿತ್ರ ಬಿಡಿಸಿದರು	–ಪ್ರಜಾವಾಣಿ ಚಿತ್ರ

ಬೆಂಗಳೂರು: ಹಿರೋಶಿಮಾ– ನಾಗಾ­ಸಾಕಿ ಮೇಲೆ ಬಾಂಬ್‌ ದಾಳಿಯ 69ನೇ ವರ್ಷದ ಶೋಕಾಚರಣೆ ಅಂಗವಾಗಿ ಜಪಾನ್‌ನ ಬಾರ್ನ್‌ಫ್ರೀ ಕಲಾ ಶಾಲೆ ನಗರದ ‘ನಮ್ಮ ಮೆಟ್ರೊ’ ರಂಗೋಲಿ ಕಲಾಕೇಂದ್ರ­ದಲ್ಲಿ ಶನಿವಾರ ಚಿತ್ರ ಬಿಡಿಸುವ ಕಾರ್ಯಕ್ರಮ ­ಏರ್ಪಡಿಸಿತ್ತು.

ಕಲಾವಿದರು, ಜಪಾನ್‌ ಮತ್ತು ನಗ­ರದ ಶಾಲೆಗಳ ವಿದ್ಯಾರ್ಥಿಗಳು ಒಂದೇ ಕ್ಯಾನ್ವಾಸ್‌ನಲ್ಲಿ ಚಿತ್ರ ಬಿಡಿಸಿದರು. ಜಪಾನ್‌ನ ಬಾರ್ನ್‌ಫ್ರೀ ಕಲಾ ಶಾಲೆಯ ರೇನಾ ಮಸುಯಾಮ , ‘ಹಿರೋಶಿಮಾ– ನಾಗಾಸಾಕಿ ಮೇಲೆ ಬಾಂಬ್‌ ದಾಳಿಯನ್ನು ಇಂದಿಗೂ ಯಾರೂ ಮರೆತಿಲ್ಲ. ಆ ಕರಾಳ ಘಟನೆ ಪರಿಣಾಮವನ್ನು ಇನ್ನೂ ಜಪಾನಿ­ಗರು ಎದುರಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.