ADVERTISEMENT

ಹೊಂಡಗಳ ಹಾದಿಯಲ್ಲಿ ಬಂಡಿಗೆಲ್ಲಿ ದಾರಿ...?

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST
ಕಾವೇರಿ ನೀರು ಪೂರೈಕೆಯ ನೀರಿನ ಒತ್ತಡವನ್ನು ಪರೀಕ್ಷಿಸಲು ಜಲಮಂಡಳಿಯು ಕೋರಮಂಗಲದ ಟೀಚರ್ಸ್‌ ಕಾಲೊನಿಯ ಐದನೇ ಮುಖ್ಯ ರಸ್ತೆಯನ್ನು ಕೆಲವು ದಿನಗಳ ಹಿಂದೆ ಅಗೆದಿದೆ. ಪ್ರಜಾವಾಣಿ ಚಿತ್ರಗಳು ಎಸ್.ಕೆ.ದಿನೇಶ್, ಎಂ.ಎಸ್. ಮಂಜುನಾಥ್, ರಂಜು ಪಿ.
ಕಾವೇರಿ ನೀರು ಪೂರೈಕೆಯ ನೀರಿನ ಒತ್ತಡವನ್ನು ಪರೀಕ್ಷಿಸಲು ಜಲಮಂಡಳಿಯು ಕೋರಮಂಗಲದ ಟೀಚರ್ಸ್‌ ಕಾಲೊನಿಯ ಐದನೇ ಮುಖ್ಯ ರಸ್ತೆಯನ್ನು ಕೆಲವು ದಿನಗಳ ಹಿಂದೆ ಅಗೆದಿದೆ. ಪ್ರಜಾವಾಣಿ ಚಿತ್ರಗಳು ಎಸ್.ಕೆ.ದಿನೇಶ್, ಎಂ.ಎಸ್. ಮಂಜುನಾಥ್, ರಂಜು ಪಿ.   

ಕಾವೇರಿ ನೀರು ಪೂರೈಕೆಯ ನೀರಿನ ಒತ್ತಡವನ್ನು ಪರೀಕ್ಷಿಸಲು ಜಲಮಂಡಳಿಯು ಕೋರಮಂಗಲದ ಟೀಚರ್ಸ್‌ ಕಾಲೊನಿಯ ಐದನೇ ಮುಖ್ಯ ರಸ್ತೆಯನ್ನು ಕೆಲವು ದಿನಗಳ ಹಿಂದೆ ಅಗೆದಿದೆ.ದುಸ್ಥಿತಿಗೆ ನಿರ್ಲಕ್ಷ್ಯ ಕಾರಣ

ದುಃಸ್ಥಿತಿಗೆ ನಿರ್ಲಕ್ಷ್ಯ ಕಾರಣ
ಬೆಂಗಳೂರು: `ಲಗ್ಗೆರೆಯಿಂದ ನಗರಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳ ಸ್ಥಿತಿ ಶೋಚನೀಯವಾಗಿದ್ದು, ರಸ್ತೆ ದುರಸ್ತಿ ಮಾಡಲು ಸರ್ಕಾರ ಕಾಳಜಿ ವಹಿಸುತ್ತಿಲ್ಲ' ಎಂದು ಲಗ್ಗೆರೆ ಗಣಪತಿ ನಗರದ ನಿವಾಸಿ ಯಶಸ್ವಿ ಜೆ. ದೂರಿದ್ದಾರೆ.

`ಮಾಗಡಿ ಮುಖ್ಯ ರಸ್ತೆಯಿಂದ ಪೀಣ್ಯ ಎರಡನೇ ಹಂತದ ಬಸ್ ನಿಲ್ದಾಣದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, 10 ನಿಮಿಷದ ದಾರಿಯನ್ನು ತಲುಪಲು ಬಸ್‌ಗಳು ಅರ್ಧ ಗಂಟೆ ತೆಗೆದುಕೊಳ್ಳುತ್ತಿವೆ. ಲಗ್ಗೆರೆ ಬಸ್ ನಿಲ್ದಾಣ-ಎಂ.ಇ.ಐ ಕಾಲೋನಿ ನಡುವಿನ ತಾತ್ಕಾಲಿಕ ರಸ್ತೆಯು ವಾಹನಗಳು ಸಂಚರಿಸುವ ಸ್ಥಿತಿಯಲ್ಲಿ ಇಲ್ಲ. ಕಾಮಗಾರಿಗಾಗಿ ಜಲಮಂಡಳಿಯು ರಸ್ತೆಯನ್ನು ಅಗೆದಿದ್ದು, ಒಳಚರಂಡಿ ಕೊಳವೆಗಳನ್ನು ಅಳವಡಿಸಿದ ಬಳಿಕ ರಸ್ತೆಯನ್ನು ದುರಸ್ತಿ ಮಾಡಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಓದುಗರ ಗಮನಕ್ಕೆ
ಮಹಾನಗರದಲ್ಲಿನ ರಸ್ತೆಗಳ ಅವ್ಯವಸ್ಥೆಯ ತೀವ್ರತೆಯನ್ನು ನೀವೂ ಅನುಭವಿಸುತ್ತಿದ್ದೀರಿ. ಇಂತಹ ಕೆಟ್ಟ ರಸ್ತೆಗಳ ಛಾಯಾಚಿತ್ರಗಳ ಜೊತೆಯಲ್ಲಿ ಜತೆಗೆ ರಸ್ತೆಗುಂಡಿಗಳಿಂದ ತಾವು ಅನುಭವಿಸಿದ ತೊಂದರೆಗಳನ್ನೂ `ಬರಹ' ಅಥವಾ `ನುಡಿ' ತಂತ್ರಾಂಶವನ್ನು ಬಳಸಿ ಬರೆದು ಕಳುಹಿಸಬಹುದು. ಇವುಗಳಲ್ಲಿ ಆಯ್ದ ಚಿತ್ರ ಹಾಗೂ ಬರಹಗಳನ್ನು ಪ್ರಕಟಿಸಲಾಗುತ್ತದೆ. ಇಮೇಲ್ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.